Kolara Heart Attack: ಹೃದಯಾಘಾತದಿಂದ ಸಾವಿಗೀಡಾದ ವೈದ್ಯಾಧಿಕಾರಿಯ ಕೊಠಡಿಯಲ್ಲಿ ಮಾಟಮಂತ್ರದ ಗೊಂಬೆಗಳು ಪತ್ತೆ

Share the Article

Kolara Heart Attack: ಸಾರ್ವಜನಿಕ ಆಸ್ಪತ್ರೆಯ ವೈದ್ಯಾಧಿಕಾರಿ ಡಾ.ವಸಂತ್‌ ಕುಮಾರ್‌ ಅವರ ಕೊಠಡಿ ಹಾಗೂ ಲಾಕರ್‌ಗಳಲ್ಲಿ ಮಾಟ ಮಾತ್ರದ ಗೊಂಬೆಗಳು ಕಂಡು ಬಂದಿದೆ. ಇವರು ಹೃದಯಾಘಾತದಿಂದ ಮೃತಪಟ್ಟಿದ್ದರು. ಇದೀಗ ಈ ವಸ್ತುಗಳನ್ನು ನೋಡಿ ಆಸ್ಪತ್ರೆ ಸಿಬ್ಬಂದಿಗೆ ಆತಂಕ ಉಂಟಾಗಿದೆ.

ಹಾಸನ ಜಿಲ್ಲೆಯಲ್ಲಿ ಇತ್ತೀಚೆಗೆ ಹೃದಯಾಘಾತದಿಂದ ಮೃತಪಡುತ್ತಿರುವವರ ಸಂಖ್ಯೆ ಹೆಚ್ಚಳವಾಗಿತ್ತು. ಜೂ.5 ರಂದು ಡಾ.ವಸಂತ್‌ ಮೃತಪಟ್ಟಿದ್ದ ಹಿನ್ನೆಲೆಯಲ್ಲಿ ಬೇರೆ ವೈದ್ಯರು ಅಧಿಕಾರ ಸ್ವೀಕರಿಸಲು ಆಗಮಿಸುವ ಹಿನ್ನೆಲೆಯಲ್ಲಿ ಶನಿವಾರ ಮಹಿಳಾ ಸಿಬ್ಬಂದಿ ವೈದ್ಯಾಧಿಕಾರಿಯ ಕೊಠಡಿ ಸ್ವಚ್ಛ ಮಾಡಲೆಂದು ಬೀರಿನ ಬಾಗಿಲು ತೆರೆದಾಗ ಅಲ್ಲಿದ್ದ ಒಂದು ಬಾಕ್ಸ್‌ನಲ್ಲಿ ಅಪ್ಪಿಕೊಂಡ ರೀತಿಯ ಮಣ್ಣಿನ ಗೊಂಬೆಗಳು, ಮಾಟಮಂತ್ರದ ವಸ್ತುಗಳು ಕಂಡು ಬಂದಿದೆ. ಕೂಡಲೇ ಈ ಮಾಹಿತಿಯನ್ನು ಡಾ.ಶ್ರೀನಿವಾಸ್‌ ಅವರಿಗೆ ನೀಡಿದ್ದಾರೆ.

Comments are closed.