Home News Suspicious Boat: ಮಹಾರಾಷ್ಟ್ರ ಕರಾವಳಿಯಲ್ಲಿ ವಿದೇಶಿ ಗುರುತುಗಳಿರುವ ಅನುಮಾನಾಸ್ಪದ ದೋಣಿ ಪತ್ತೆ – ಸ್ಥಳಕ್ಕೆ ಪೊಲೀಸರ...

Suspicious Boat: ಮಹಾರಾಷ್ಟ್ರ ಕರಾವಳಿಯಲ್ಲಿ ವಿದೇಶಿ ಗುರುತುಗಳಿರುವ ಅನುಮಾನಾಸ್ಪದ ದೋಣಿ ಪತ್ತೆ – ಸ್ಥಳಕ್ಕೆ ಪೊಲೀಸರ ದೌಡು

Hindu neighbor gifts plot of land

Hindu neighbour gifts land to Muslim journalist

Suspicious Boat: ಮಹಾರಾಷ್ಟ್ರದ ರೇವ್‌ಡಾಂಡಾದ ಕೊರ್ಲೈ ಕರಾವಳಿಯಿಂದ ಎರಡು ನಾಟಿಕಲ್ ಮೈಲುಗಳಷ್ಟು ದೂರದಲ್ಲಿ ವಿದೇಶಿ ಗುರುತುಗಳನ್ನು ಹೊಂದಿರುವ ಅನುಮಾನಾಸ್ಪದ ದೋಣಿ ಕಂಡುಬಂದಿದೆ. I ಹಿನ್ನೆಲೆಯಲ್ಲಿ ಕರಾವಳಿಯಲ್ಲಿ ಭದ್ರತೆಯನ್ನು ಹೆಚ್ಚಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಭದ್ರತಾ ಸಿಬ್ಬಂದಿ ಹಡಗನ್ನು ಗಮನಿಸಿದ್ದು, ನಂತರ ಆ ಪ್ರದೇಶದಲ್ಲಿ ದೊಡ್ಡ ಪೊಲೀಸ್‌ ಪಡೆಯನ್ನು ನಿಯೋಜಿಸಲಾಗಿದೆ. ರಾಯಗಡ್ ಪೊಲೀಸರು, ಬಾಂಬ್ ಪತ್ತೆ ಮತ್ತು ವಿಲೇವಾರಿ ದಳ, ತ್ವರಿತ ಪ್ರತಿಕ್ರಿಯೆ ತಂಡ, ನೌಕಾಪಡೆ ಮತ್ತು ಕರಾವಳಿ ಕಾವಲು ಪಡೆಗಳ ತಂಡಗಳು ಸ್ಥಳಕ್ಕೆ ಧಾವಿಸಿವೆ. ರಾಯಗಢ ಪೊಲೀಸ್ ವರಿಷ್ಠಾಧಿಕಾರಿ ಅಂಚಲ್ ದಲಾಲ್, ಹಿರಿಯ ಪೊಲೀಸ್ ಅಧಿಕಾರಿಗಳೊಂದಿಗೆ ಪರಿಸ್ಥಿತಿಯನ್ನು ಮೇಲ್ವಿಚಾರಣೆ ಮಾಡಲಾಗುತ್ತಿದೆ ಎಂದು ಅಧಿಕಾರಿ ತಿಳಿಸಿದ್ದಾರೆ.

ಭಾರೀ ಮಳೆ ಮತ್ತು ಬಲವಾದ ಗಾಳಿ ಬೀಸುತ್ತಿರುವ ಹಿನ್ನೆಲೆಯಲ್ಲಿ ದೋಣಿ ಬಳಿ ತಲುಪುವ ಪ್ರಯತ್ನಕ್ಕೆ ಅಡ್ಡಿಯಾಗಿದೆ. ಅಧಿಕಾರಿ ದಲಾಲ್ ಸ್ವತಃ ಬಾರ್ಜ್ ಬಳಸಿ ದೋಣಿ ಸಮೀಪಿಸಲು ಪ್ರಯತ್ನಿಸಿದರು. ಆದರೆ ಪ್ರತಿಕೂಲ ಹವಾಮಾನದಿಂದಾಗಿ ಹಿಂತಿರುಗಬೇಕಾಯಿತು ಎಂದು ಅಧಿಕಾರಿ ತಿಳಿಸಿದ್ದಾರೆ. ಮುನ್ನೆಚ್ಚರಿಕೆ ಕ್ರಮವಾಗಿ ಜಿಲ್ಲೆಯಲ್ಲಿ ಹೆಚ್ಚಿನ ಪೊಲೀಸರನ್ನು ನಿಯೋಜಿಸಲಾಗಿದ್ದು, ಒಟ್ಟಾರೆ ಭದ್ರತೆಯನ್ನು ಹೆಚ್ಚಿಸಲಾಗಿದೆ ಎಂದು ಅವರು ಹೇಳಿದರು.

ಇದನ್ನೂ ಓದಿ: Iran: ಖಮೇನಿ ಕೊಲ್ಲಲ್ಪಟ್ಟರೆ, ಮೂರನೇ ಮಹಾಯುದ್ಧ ಆರಂಭವಾಗುತ್ತದೆ: ಇರಾನ್ ಅಧಿಕಾರಿ ಎಚ್ಚರಿಕೆ