Home News Karnataka Gvt: 1-10 ನೇ ತರಗತಿ ಪರೀಕ್ಷಾ ನೀತಿಯಲ್ಲಿ ಬದಲಾವಣೆ – ರಾಜ್ಯ ಸರ್ಕಾರದಿಂದ ಮಹತ್ವದ...

Karnataka Gvt: 1-10 ನೇ ತರಗತಿ ಪರೀಕ್ಷಾ ನೀತಿಯಲ್ಲಿ ಬದಲಾವಣೆ – ರಾಜ್ಯ ಸರ್ಕಾರದಿಂದ ಮಹತ್ವದ ನಿರ್ಧಾರ

Hindu neighbor gifts plot of land

Hindu neighbour gifts land to Muslim journalist

Karnataka Gvt: 1 ರಿಂದ 10ನೇ ತರಗತಿ ಪರೀಕ್ಷಾ ನೀತಿಯಲ್ಲಿ ಮಹತ್ವದ ಬದಲಾವಣೆಯನ್ನು ತರಲು ರಾಜ್ಯ ಸರ್ಕಾರ ಮುಂದಾಗಿದ್ದು, ಖಾಸಗಿ ಶಾಲೆಗಳಲ್ಲಿ ಇರುವಂತೆ ರಾಜ್ಯದ ಎಲ್ಲಾ ಸರ್ಕಾರಿ ಶಾಲೆಗಳಲ್ಲಿಯೂ ಯೂನಿಟ್ ಟೆಸ್ಟ್ ಪದ್ಧತಿ ಜಾರಿಗೊಳಿಸಲು ಕ್ರಮಕೈಗೊಂಡಿದೆ.

ಸರ್ಕಾರ ಜಾರಿಗೊಳಿಸಿರುವ ನಿಯಮದ ಪ್ರಕಾರ ಪಾಠ ಆಧಾರಿತ ಮೌಲ್ಯಾಂಕನ ಪರೀಕ್ಷೆ(LBA) ಅನುಷ್ಠಾನಗೊಳ್ಳಲಿದ್ದು, ವಿದ್ಯಾರ್ಥಿಗಳು ಪ್ರತಿ ಅಧ್ಯಯನ ಮುಗಿದ ನಂತರ ಕಿರುಪರೀಕ್ಷೆ ಬರೆಯಬೇಕಿದೆ. ಸರ್ಕಾರಿ ಶಾಲೆಗಳಲ್ಲಿ ರೂಪಣಾತ್ಮಕ ಮತ್ತು ಸಂಕಲನಾತ್ಮಕ ಮೌಲ್ಯಮಾಪನ ಜಾರಿಯಲ್ಲಿದೆ.

ರಾಜ್ಯದಲ್ಲಿ 46, 757 ಸರ್ಕಾರಿ ಶಾಲೆಗಳಿದ್ದು, 42.92 ಲಕ್ಷ ವಿದ್ಯಾರ್ಥಿಗಳು ಓದುತ್ತಿದ್ದಾರೆ. ಆರಂಭದಿಂದಲೇ ವಿದ್ಯಾರ್ಥಿಗಳ ಮೌಲ್ಯಾಂಕನ ಮಾಡಿದಲ್ಲಿ ಮುಂಬರುವ ಬೋರ್ಡ್ ಪರೀಕ್ಷೆಗಳಲ್ಲಿ ಉತ್ತಮ ಅಂಕ ಪಡೆಯಬಹುದೆಂಬ ಉದ್ದೇಶದಿಂದ ಶಿಕ್ಷಣ ಇಲಾಖೆ ಈ ಯೋಜನೆ ರೂಪಿಸಿದೆ.

ಅಂದಹಾಗೆ ರಾಜ್ಯ ಶಿಕ್ಷಣ ಸಂಶೋಧನೆ ಮತ್ತು ತರಬೇತಿ ಇಲಾಖೆ ಪಾಠ ಆಧಾರಿತ ಮೌಲ್ಯಾಂಕನ ಪ್ರಶ್ನೆ ಪತ್ರಿಕೆ ಸಿದ್ಧಪಡಿಸಿ ಶಾಲೆಗಳಿಗೆ ನೀಡಲಿದೆ. ಶಾಲೆಗಳು ಇದರ ಆಧಾರದ ಮೇಲೆ ಪರೀಕ್ಷೆ, ಮೌಲ್ಯಾಂಕನ ನಡೆಸಿ ವಿದ್ಯಾರ್ಥಿಗಳು ಪಡೆದ ಅಂಕಗಳನ್ನು ಅವರ ಸಾಧನೆಯ ಟ್ರ್ಯಾಕಿಂಗ್ ವ್ಯವಸ್ಥೆಯಲ್ಲಿ(SATS) ಅಪ್ಲೋಡ್ ಮಾಡಬೇಕಿದೆ.

ಇನ್ನು ಪ್ರತಿ ಪರೀಕ್ಷೆ 30 ಅಂಕಗಳಿಗೆ ಮೀಸಲಾಗಿದ್ದು, 25 ಪ್ರಶ್ನೆಗಳು ಇರುತ್ತವೆ. ಇವುಗಳಲ್ಲಿ ಸುಲಭ ಶೇಕಡ 75, ಸಾಮಾನ್ಯ ಶೇಕಡ 25, ಕಠಿಣ ಶೇಕಡ 10 ಎನ್ನುವ ಮಾದರಿಯಲ್ಲಿ ಪ್ರಶ್ನೆಗಳನ್ನು ವಿಭಜಿಸಿ ಪ್ರಶ್ನೆ ಪತ್ರಿಕೆ ಸಿದ್ಧಪಡಿಸಲಾಗುವುದು. ಬಹುತೇಕ ಪ್ರಶ್ನೆಗಳು ಬಹು ಆಯ್ಕೆ ಮಾದರಿಗಳಿಂದ ಕೂಡಿರುತ್ತವೆ.

ಇದನ್ನೂ ಓದಿ: Bengaluru: ರೇಣುಕಾ ಸ್ವಾಮಿ ಕೇಸ್ ನಂತೆ ಬೆಂಗಳೂರಲ್ಲಿ ಮತ್ತೊಂದು ಕೃತ್ಯ – ಹುಡುಗಿಗೆ ಮೆಸೇಜ್ ಮಾಡಿದ್ದಕ್ಕೆ ಯುವಕನನ್ನು ಬೆತ್ತಲೆಗೊಳಿಸಿ ಚಿತ್ರಹಿಂಸೆ ನೀಡಿ ವಿಕೃತಿ.!