

Basavaraj Rayareddy : ರಾಜ್ಯದಲ್ಲಿ ಅಸ್ತಿತ್ವದಲ್ಲಿರುವ ಕಾಂಗ್ರೆಸ್ ಸರ್ಕಾರವು ಚುನಾವಣಾ ಪೂರ್ವದಲ್ಲಿ ಪಂಚ ಗ್ಯಾರಂಟಿಗಳನ್ನು ಘೋಷಣೆ ಮಾಡಿ ಜನರ ವಿಶ್ವಾಸ ಪಡೆದು ಅಧಿಕಾರಕ್ಕೆ ಬಂದಿತ್ತು. ಅಂತಯೇ ಅಧಿಕಾರದ ಬಳಿಕ ಅಷ್ಟು ಗ್ಯಾರೆಂಟಿಗಳನ್ನು ಜಾರಿಗೊಳಿಸಿ ತನ್ನ ಮಾತನ್ನು ಸರ್ಕಾರ ಉಳಿಸಿಕೊಂಡಿದೆ. ಗ್ಯಾರೆಂಟಿಗಳ ವಿಷಯವಾಗಿ ರಾಜ್ಯದಲ್ಲಿ ಪರ ವಿರೋಧಗಳ ಚರ್ಚೆಗಳು ಆಗುತ್ತವೆ. ಇದೀಗ ಈ ಗ್ಯಾರಂಟಿ ಕುರಿತು ಸ್ವತಃ ಕಾಂಗ್ರೆಸ್ ನಾಯಕ, ಶಾಸಕ ಬಸವರಾಜ ರಾಯರೆಡ್ಡಿ ಹೇಳಿರುವ ಹೇಳಿಕೆಯೊಂದು ರಾಜ್ಯ ರಾಜಕೀಯದಲ್ಲಿ ಸಂಚಲನ ಸೃಷ್ಟಿಸಿದೆ.
ಹೌದು, ಕಾಂಗ್ರೆಸ್ ಹಿರಿಯ ಶಾಸಕ ಮುಖ್ಯಮಂತ್ರಿಗಳ ಆರ್ಥಿಕ ಸಲಹೆಗಾರ ಬಸವರಾಜ ರಾಯರೆಡ್ಡಿ ಕೆಲ ಗ್ರಾಮಸ್ಥರ ಜೊತೆ ಮಾತನಾಡುವ ವೇಳೆ, ಜನರು ನಮ್ಮೂರಿಗೆ ರಸ್ತೆ ಬೇಕೆಂದು ಧ್ವನಿ ಎತ್ತಿದ್ದರು. ಈ ವೇಳೆ ಹಳ್ಳಿಗಳಿಗೆ ರಸ್ತೆ ಬೇಕಾ..? ಹಾಗಾದ್ರೆ ಗ್ಯಾರಂಟಿ ಬೇಡ ಎಂದು ಬರೆದುಕೊಡಿ ಎಂದು ಹೇಳುವ ಮೂಲಕ ಗ್ಯಾರಂಟಿ ಯೋಜನೆಯಿಂದ ಅಭಿವೃದ್ಧಿ ಕುಂಠಿತವಾಗುತ್ತಿದೆ ಎಂಬ ಪರೋಕ್ಷ ಸುಳಿವು ನೀಡಿದ್ದಾರೆ. ಆದ್ರೆ ರಾಜಕೀಯವಾಗಿ ಈ ವಿಚಾರ ತೀವ್ರ ಚರ್ಚೆಗೆ ಗ್ರಾಸವಾಗಿದೆ.













