Puttur: ಪುತ್ತೂರು: ಮದುವೆಯಾಗುವುದಾಗಿ ನಂಬಿಸಿ ದೈಹಿಕ ಸಂಪರ್ಕ ಪ್ರಕರಣ: ಆರೋಪಿ ತಂದೆಗೆ ಜಾಮೀನು ಮಂಜೂರು

Puttur : ಮದುವೆಯಾಗುವುದಾಗಿ ನಂಬಿಸಿ ದೈಹಿಕ ಸಂಪರ್ಕ ಬೆಳೆಸಿ, ಮಗುವಿಗೆ ಜನ್ಮ ನೀಡಿದ ಪ್ರಕರಣಕ್ಕೆ ಸಂಬಂಧಿಸಿ ಕಳೆದ ಕೆಲವು ದಿನಗಳಿಂದ ನಾಪತ್ತೆಯಾಗಿದ್ದ ಕೃಷ್ಣ ಜೆ. ರಾವ್ (21) ಬಂಧನದ ಬೆನ್ನಲ್ಲೆ ಪರಾರಿಯಾಗಲು ಸಹಕರಿಸಿದ ಆರೋಪಿ ತಂದೆ ಪಿ.ಜಿ.ಜಗನ್ನಿವಾಸ ರಾವ್ ಅವರನ್ನು ಬಂಧಿಸಲಾಗಿತ್ತು. ಬಂಧನದಲ್ಲಿದ್ದ ಜಗನ್ನಿವಾಸ್ ರಾವ್ ಅವರಿಗೆ ಇದೀಗ ಜಾಮೀನು ಮಂಜೂರಾಗಿದೆ.

ಆರೋಪಿ ತಪ್ಪಿಸಿಕೊಂಡ ನಂತರ ಆತನ ಸುಳಿವು ಸಿಗದಂತೆ ಜಗನ್ನಿವಾಸ ರಾವ್ ಮಾಡಿದ್ದರು ಎನ್ನಲಾಗಿತ್ತು. ಪ್ರಧಾನ ವ್ಯವಹಾರಿಕ ನ್ಯಾಯಧೀಶರಾದ ಶಿವಣ್ಣ ಎಚ್. ಆರ್ ಜಾಮೀನು ಮಂಜೂರು ಮಾಡಿದ್ದು ಅವರ ಪರ ನ್ಯಾಯವಾದಿ ಸುರೇಶ್ ರೈ ಪಡ್ಡಂಬೈಲು, ರಾಘವ ಪಿ, ಶ್ರೀಕಾಂತ್ ವಾದಿಸಿದ್ದರು.
Comments are closed.