Mangaluru: ಪುತ್ತೂರು: ವಿಹರಿಸುತ್ತಿದ್ದ ಜೋಡಿಗೆ ಪುಂಡರಿಂದ ಕಿರುಕುಳ: ವಿಡಿಯೋ ಹರಿಬಿಟ್ಟ ಯುವಕರು

Mangaluru: ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ನೈತಿಕ ಪೊಲೀಸ್‌ಗಿರಿ ಮುಂದುವರಿದಿದೆ. ಪುತ್ತೂರಿನ ಬಿರುಮಲೆಗುಡ್ಡದಲ್ಲಿ ವಿಹಾರ ಮಾಡುತ್ತಿದ್ದ ಜೋಡಿಗೆ ಪಾನಮತ್ತರಾಗಿ ಬಂದ ಯುವಕರ ಗುಂಪೊಂದು ಕಿರುಕುಳ ನೀಡಿರುವ ಘಟನೆ ನಡೆದಿದೆ ಎಂದು ವರದಿಯಾಗಿದೆ.

ಜೋಡಿಯ ಫೋಟೋ, ವಿಡಿಯೋ ತೆಗೆದು ಸಾಮಾಜಿಕ ಜಾಲತಾಣದಲ್ಲಿ ಹಾಕಲಾಗಿದೆ ಎಂದು ವರದಿಯಾಗಿದೆ. ಅಷ್ಟು ಮಾತ್ರವಲ್ಲದೇ ಯುವತಿಯ ಹೆಲ್ಮೆಟ್ ಕಸಿದುಕೊಂಡು ಹಲ್ಲೆಗೆ ಯತ್ನ ಮಾಡಲಾಗಿದೆ. ಅವಾಚ್ಯ ಶಬ್ದಗಳಿಂದ ಪುಂಡರು ನಿಂದನೆ ಮಾಡಿ, ಕಿರುಕುಳ ನೀಡಿರುವ ಘಟನೆ ನಡೆದಿದೆ.
ಜೋಡಿಗಳು ಹಾಗೋ ಹೀಗೋ ಯುವಕರ ಗುಂಪಿನಿಂದ ತಪ್ಪಿಸಿಕೊಂಡಿದ್ದಾರೆ. ಜಿಲ್ಲೆಯಲ್ಲಿ ನೈತಿಕ ಪೊಲೀಸ್‌ಗಿರಿಗೆ ಜನರು ಕಿಡಿಕಾರಿದ್ದಾರೆ.
Comments are closed.