Death: ನಾಪತ್ತೆಯಾಗಿದ್ದ ಕೊಡಗಿನ ಫಾರೆಸ್ಟ್ ಗಾರ್ಡ್ ಶವವಾಗಿ ಪತ್ತೆ!

Death: ಒಂದು ವಾರದ ಹಿಂದೆ ಕಾಣೆಯಾದ ಕೊಡಗು ಮೂಲದ ಕಾಲೂರು ಗ್ರಾಮದ ಫಾರೆಸ್ಟ್ ಗಾರ್ಡ್ ಶರತ್ (33) ರವರ ಶವ ನಗ್ನ ರೀತಿಯಲ್ಲಿ

ಕಡೂರು ತಾಲೂಕಿನ ಸಖರಾಯಪಟ್ಟಣದ ಸಮೀಪದ ಹಳೇಹಟ್ಟಿ ತಾಂಡ್ಯ ಬಳಿ ಪತ್ತೆಯಾಗಿದೆ.
ಅಲ್ಲಿನ ಅರಣ್ಯ ಇಲಾಖೆ ಸಿಬ್ಬಂದಿಗಳು ಕಳೆದ ಆರು ದಿನಗಳಿಂದ ಹುಡುಕಾಟ ನಡೆಸುತ್ತಿದ್ದರು. ಆದರೆ ಪತ್ತೆ ಆಗಿರಲಿಲ್ಲ. ಇಂದು ಶೋಧ ಕಾರ್ಯ ನಡೆದಾಗ ಶರತ್ ರವರ ಶವ ಪತ್ತೆಯಾಗಿದೆ.
ಈ ಹಿಂದೆ ಸಖರಾಯಪಟ್ಟಣದ
ನೀಲಗಿರಿ ಪ್ಲಾಂಟೇಷನ್ ನಲ್ಲಿ ಆತನ ಬೈಕ್, ಜರ್ಕಿನ್ ಪತ್ತೆಯಾಗಿತ್ತು
ದೇಹ ಕೊಳೆತಿದ್ದು ಹೀಗಾಗಿ ಸ್ಥಳದಲ್ಲೇ ಮರಣೋತ್ತರ ಪರೀಕ್ಷೆಯನ್ನು ಪೊಲೀಸರು ಕೈಗೊಂಡಿದ್ದಾರೆ.
ಇದನ್ನೂ ಓದಿ: Tejasvi Surya: ಮನೆಗೆ ಹೊಸ ಅತಿಥಿಯನ್ನು ಬರಮಾಡಿಕೊಂಡ ತೇಜಸ್ವಿ ಸೂರ್ಯ ದಂಪತಿ
Comments are closed.