Bus and Bike Accident: ಖಾಸಗಿ ಬಸ್‌-ಬೈಕ್‌ ನಡುವೆ ಭೀಕರ ಅಪಘಾತ, ಬಸ್ಸು ಸುಟ್ಟುಕರಕಲು, ಬೈಕ್‌ ಸವಾರ ಸಾವು, ಪ್ರಯಾಣಿಕರು ಪಾರು

Share the Article

Bus and Bike Accident: ಚಿತ್ರದುರ್ಗ: ಖಾಸಗಿ ಬಸ್‌ ಮತ್ತು ಬೈಕ್‌ ನಡುವೆ ಭೀಕರ ಅಪಘಾತ ಉಂಟಾಗಿ ಸ್ಥಳದಲ್ಲಿಯೇ ಸವಾರ ಜೀವ ಕಳೆದುಕೊಂಡ ಘಟನೆ ಚಿತ್ರದುರ್ಗ ಹೊರವಲಯದ ಮದಕರಿ ಪುರ ಬ್ರಿಡ್ಜ್‌ ಬಳಿ ನಡೆದಿದೆ.

ಈ ಘಟನೆಯಲ್ಲಿ ಬೈಕ್‌ ಸವಾರ ರಮೇಶ್‌ (32) ಸ್ಥಳದಲ್ಲಿಯೇ ಸಾವಿಗೀಡಾಗಿದ್ದಾರೆ. ಬಸ್ಸಿನಲ್ಲಿ 40 ಕ್ಕೂ ಹೆಚ್ಚು ಪ್ರಯಾಣಿಕರು ಪ್ರಯಾಣ ಮಾಡುತ್ತಿದ್ದ ಗಣೇಶ ಟ್ರಾವೆಲ್ಸ್‌ ಖಾಸಗಿ ಬಸ್‌ ದಾವಣಗೆರೆ ಕಡೆಯಿಂದ ಬೆಂಗಳೂರು ಕಡೆಗೆ ಪ್ರಯಾಣ ಮಾಡುತ್ತಿತ್ತು. ಈ ವೇಳೆ ಬೈಕ್‌ ಹಾಗೂ ಬಸ್‌ ನಡುವೆ ಅಪಘಾತ ಉಂಟಾಗಿದೆ.

ಬಸ್‌ನ ಕೆಳಭಾಗದಲ್ಲಿ ಬೈಕ್‌ ಸಿಲುಕಿಕೊಂಡು, ಅಪಘಾತ ನಡೆದಿದ್ದು, ಬಸ್‌ ಚಾಲಕನಿಗೆ ತಕ್ಷಣಕ್ಕೆ ಇದು ತಿಳಿದು ಬಂದಿಲ್ಲ. ಹಾಗಾಗಿ ಬಸ್‌ ಮುಂದಕ್ಕೆ ಹೋಗಿದೆ. ನಂತರ ಬೈಕ್‌ ಮತ್ತು ಬಸ್ಸಿನ ನಡುವೆ ಸ್ಪಾರ್ಕ್‌ ಆಗಿ ಬೆಂಕಿ ಕಾಣಿಸಿದ್ದು, ಕೂಡಲೇ ಬೆಂಕಿ ಹೊತ್ತಿಕೊಂಡಿದ್ದು, ಇಡೀ ಬಸ್ಸನ್ನೇ ಸುಟ್ಟುಕರಕಲು ಮಾಡಿದೆ.

ಸದ್ಯಕ್ಕೆ ಬೆಂಕಿ ಕಾಣಿಸಿಕೊಂಡಾಗ ಪ್ರಯಾಣಿಕರೆಲ್ಲೂ ಕೂಡಲೇ ಬಸ್‌ನಿಂದ ಇಳಿದಿದ್ದು, ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಘಟನಾ ಸ್ಥಳಕ್ಕೆ ಅಗ್ನಿಶಾಮಕ ಸಿಬ್ಬಂದಿ ಭೇಟಿ ನೀಡಿ ಬೆಂಕಿ ನಂದಿಸುವ ಕೆಲಸ ಮಾಡಿದ್ದಾರೆ. ಚಿತ್ರದುರ್ಗ ಎಸ್‌ಪಿ ರಂಜಿತ್‌ ಕುಮಾರ್‌ ಬಂಟಾರೂ ಭೇಟಿ ನೀಡಿದ್ದರೆ. ಚಿತ್ರದುರ್ಗ ಗ್ರಾಮಾಂತರ ಠಾಣಾ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದೆ.

ಇದನ್ನೂ ಓದಿ: Crime: ವೇಶ್ಯಾವಾಟಿಕೆ: ಸುರಂಗ ಮಾರ್ಗದ ಅಡಗುತಾಣದಲ್ಲಿ ಮಹಿಳೆಯರ ರಕ್ಷಣೆ!

Comments are closed.