Madarasa Rape: ಮದರಸಾದ ವಿದ್ಯಾರ್ಥಿನಿ ಮೇಲೆ ಅತ್ಯಾಚಾರ: ಗರ್ಭಪಾತಕ್ಕೆ ಒತ್ತಾಯಿಸಿದ ಧರ್ಮಗುರುವಿನ ಬಂಧನ

Share the Article

Lucknow: ಉತ್ತರಪ್ರದೇಶದ ಮೀರತ್‌ನ ಮದರಸಾವೊಂದರಲ್ಲಿ 22 ವರ್ಷದ ವಿದ್ಯಾರ್ಥಿನಿಯ ಮೇಲೆ ಅತ್ಯಾಚಾರ ಮಾಡಿ, ಗರ್ಭಪಾತ ಮಾಡಲು ಒತ್ತಾಯ ಮಾಡಿದ ಆರೋಪದಡಿ ಧರ್ಮಗುರು ಒಬ್ಬನನ್ನು ಬಂಧನ ಮಾಡಲಾಗಿರುವ ಕುರಿತು ಪೊಲೀಸರು ತಿಳಿಸಿದ್ದಾರೆ.

ಬಿಹಾರದ ನಿವಾಸಿ ಸಂತ್ರಸ್ತೆ ಹೇಳಿರುವ ಪ್ರಕಾರ, ಧರ್ಮಗುರು ತನ್ನ ಮೇಲೆ ಹಲವು ಬಾರಿ ಅತ್ಯಾಚಾರ ಮಾಡಿದ್ದು, ತಾನು ಗರ್ಭಿಣಿಯಾದಾಗ ಗರ್ಭಪಾತ ಮಾಡಿಸಿಕೊಳ್ಳುವಂತೆ ಒತ್ತಾಯಿಸಿದ್ದಾನೆ ಎಂದು ಪೊಲೀಸರಲ್ಲಿ ಹೇಳಿದ್ದಾಳೆ. ಆರೋಪಿಯ ಪತ್ನಿಯು ಈ ಕೃತ್ಯಕ್ಕೆ ಕುಮ್ಮಕ್ಕು ನೀಡಿದ್ದಾಳೆ. ನನಗೆ ಹಲವು ಬಾರಿ ಬೆದರಿಕೆ ಹಾಕಿದ್ದಾಳೆ ಎಂದು ಸಂತ್ರಸ್ತೆ ದೂರಿನಲ್ಲಿ ಉಲ್ಲೇಖ ಮಾಡಿರುವುದಾಗಿ ಪೊಲೀಸರು ಹೇಳಿದ್ದಾರೆ.

ಆರೋಪಿಗಳ ವಿರುದ್ಧ ವಿವಿಧ ಸೆಕ್ಷನ್‌ಗಳ ಅಡಿಯಲ್ಲಿ ಎಫ್‌ಐಆರ್‌ ದಾಖಲಾಗಿದ್ದು, ಆರೋಪಿಗಳನ್ನು ಬಂಧನ ಮಾಡಲಾಗಿದೆ. ಸಂತ್ರಸ್ತೆಯ ಹೇಳಿಕೆಯನ್ನು ದಾಖಲು ಮಾಡಿದ್ದು, ತನಿಖೆ ನಡೆಯುತ್ತಿರುವುದಾಗಿ ಪೊಲೀಸರು ಹೇಳಿದ್ದಾರೆ.

ಇದನ್ನೂ ಓದಿ: Crime: ಬಿ.ಸಿ.ರೋಡ್: ಮೇಯಲು ಬಿಟ್ಟ ದನಗಳನ್ನು ಕಾರಿನಲ್ಲಿ ತುಂಬಿಸಿ ಕೊಂಡೊಯ್ದ ಕಟುಕರು: ಪ್ರಕರಣ ದಾಖಲು

Comments are closed.