Puttur: ಪುತ್ತೂರು: ಎಸಿಯಲ್ಲಿ ಕಾಣಿಸಿಕೊಂಡ ಹೊಗೆ: ನಿವೃತ್ತ ಶಿಕ್ಷಕ ಮೃತ್ಯು!

Puttur: ಪುತ್ತೂರಿನ (puttur) ಕೂರ್ನಡ್ಕ ಸಂಜಯನಗರ ಶ್ರೀಲಕ್ಷ್ಮೀ ಪ್ರಸನ್ನ ಲೇ ಔಟ್ ನಲ್ಲಿ ಎಸಿ ಉಪಕರಣದಲ್ಲಿ ಕಾಣಿಸಿಕೊಂಡ ಹೊಗೆಯಿಂದಾಗಿ ಉಸಿರಾಟದ ತೊಂದರೆಯಿಂದಾಗಿ ಆಸ್ಪತ್ರೆಗೆ ದಾಖಲಾದ ಸುಮಾರು 80 ವರ್ಷ ಪ್ರಾಯದ ನಿವೃತ್ತ ಶಿಕ್ಷಕ ಮುತ್ತು ಶೆಟ್ಟಿ ಅವರು ನಿಧನರಾಗಿದ್ದಾರೆ.

ನಿವೃತ್ತ ಶಿಕ್ಷಕ ಮುತ್ತು ಶೆಟ್ಟಿ ಅವರ ಮನೆಯಲ್ಲಿ ಜು.4 ರಂದು ಕೊಠಡಿಯಲ್ಲಿನ ಹವಾನಿಯಂತ್ರಣ ಉಪಕರಣದಲ್ಲಿ ದೋಷ ಕಂಡು ಹೊಗೆ ಕಾಣಿಸಿಕೊಂಡಿತ್ತು. ಕೂಡಲೇ ಅಗ್ನಿಶಾಮಕದಳದವರು ಸ್ಥಳಕ್ಕೆ ಆಗಮಿಸಿ ಬೆಂಕಿ ನಂದಿಸಿ ತೆರಳಿದ್ದಾರೆ. ಆದರೆ ವಯೋವೃದ್ಧ ನಿವೃತ್ತ ಶಿಕ್ಷಕ ಮುತ್ತು ಶೆಟ್ಟಿ ಅವರಿಗೆ ಮನೆಯಲ್ಲಿ ಆವರಿಸಿದ ಹೊಗೆಯಿಂದಾಗಿ ಉಸಿರಾಟದ ತೊಂದರೆ ಆಗಿ ಅವರ ಆರೋಗ್ಯದಲ್ಲಿ ಏರುಪೇರಾಗಿತ್ತು. ತಕ್ಷಣ ಅವರನ್ನು ಪುತ್ತೂರು ಖಾಸಗಿ ಆಸ್ಪತ್ರೆಗೆ ಕರೆದೊಯ್ಯಲಾಯಿತಾದರೂ ಚಿಕಿತ್ಸೆಗೆ ಸ್ಪಂದಿಸದೆ ಮೃತಪಟ್ಟಿದ್ದಾರೆ.
ಇದನ್ನೂ ಓದಿ: Bengaluru: ಇನ್ಫೋಸಿಸ್ ನ ಶೌಚಾಲಯದಲ್ಲಿ ಮಹಿಳೆಯ ವಿಡಿಯೋ ಮಾಡುತ್ತಿದ್ದ ಟೆಕ್ಕಿಯ ಬಂಧನ!
Comments are closed.