Formers Protest: ದೇವನಹಳ್ಳಿಯ‌ ಭೂಸ್ವಾಧೀನಕ್ಕೆ ವಿರೋಧ – ರೈತರಿಂದ ಬೃಹತ್ ಹೋರಾಟ – ಸಿಎಂ ಭೇಟಿಯಾಗಿ ಬೇಡಿಕೆ ಈಡೇರಿಕೆಗಾಗಿ ಆಗ್ರಹ

Share the Article

Formers Protest: ದೇವನಹಳ್ಳಿಯ ಚನ್ನರಾಯಪಟ್ಟಣದಲ್ಲಿ KIADB ಭೂಸ್ವಾಧೀನಕ್ಕೆ ಖಂಡಿಸಿ ಇಂದು ಬೆಂಗಳೂರಿನ ಫ್ರೀಡಂ ಪಾರ್ಕ್ನಲ್ಲಿ ರೈತರಿಂದ ಬೃಹತ್ ಹೋರಾಟ ಹಮ್ಮಿಕೊಳ್ಳಲಾಗಿದೆ. ರಾಜ್ಯದ ಹಲವು ರೈತಪರ ಸಂಘಟನೆಗಳು ಪ್ರತಿಭಟನೆಯಲ್ಲಿ ಭಾಗಯಾಗಿದ್ದಾರೆ. ಕಳೆದ ಜೂನ್ 27ರಿಂದಲೂ ಫ್ರೀಡಂ ಪಾರ್ಕ್ ನಲ್ಲಿ ನಿರಂತರ ದೇವನಹಳ್ಳಿ ಭೂಸ್ವಾಧೀನ ವಿಚಾರವಾಗಿ ಹೋರಾಟ ನಡೆಯುತ್ತಲೇ ಇದೆ.

ಇಂದು ರಾಷ್ಟ್ರೀಯ ಮಟ್ಟದ ರೈತ ಮುಖಂಡರು ಭಾಗಿಯಾಗಲಿದ್ದು, ರೈತರ ಪ್ರತಿಭಟನೆಯಲ್ಲಿ ನಟ ಪ್ರಕಾಶ್ ರಾಜ್ ಕೂಡ ಭಾಗವಹಿಸಲಿದ್ದಾರೆ. ರೈತರು ವಿವಿಧ ಬೇಡಿಕೆಗಳನ್ನಿಟ್ಟುಕೊಂಡು ಇಂದು ಬೃಹತ್ ಪ್ರತಿಭಟನೆಯನ್ನು ಹಮ್ಮಿಕೊಂಡಿದ್ದಾರೆ. ದೇವನಹಳ್ಳಿ ಚಲೋ ವೇಳೆ ಬಂಧಿಸಿದ ರೈತರನ್ನ ಬಿಡುಗಡೆಗೊಳಿಸಲು ಆಗ್ರಹ, ಕೆಐಎಡಿಬಿಯನ್ನ ರದ್ದುಗೊಳಿಸಬೇಕು ಎಂದು ಆಗ್ರಹ, ರೈತರ ಬಂಧನಕ್ಕೆ ಕಾರಣವಾದ ಡಿಸಿಪಿ ಸಜಿತ್ ಅವರನ್ನ ಅಮಾನತುಗೊಳಿಸಲು ಆಗ್ರಹ, ಹೈಟೆಕ್ ಡಿಫೆನ್ಸ್ & ಏರೋಸ್ಪೇಸ್ ಪಾರ್ಕ್ ಅಭಿವೃದ್ಧಿಗೆ ಜಮೀನು ಸ್ವಾಧೀನ, ದೇವನಹಳ್ಳಿ ತಾಲ್ಲೂಕಿನ ಚನ್ನರಾಯಪಟ್ಟಣ ಹೋಬಳಿಗೆ ಸೇರಿದ 1777 ಎಕರೆ ಸ್ವಾಧೀನಕ್ಕೆ ತಯಾರಿ ನಡೆಸಿರುವ ವಿರುದ್ಧ ಅಂದಿನಿಂದ ಇಂದಿನವರೆಗೂ ರೈತರು ಪ್ರತಿಭಟನೆ ಮಾಡ್ತಿದ್ದಾರೆ. ಈ ಎಲ್ಲಾ ಬೇಡಿಕೆಗಳನ್ನಿಟ್ಟುಕೊಂಡು ರೈತರು ಇಂದು ಉಗ್ರ ಹೋರಾಟ ನಡೆಸಲಿದ್ದಾರೆ.

ಬೇಡಿಕೆಗಳ ಆಗ್ರಹಕ್ಕಾಗಿ ದೇವಹಳ್ಳಿ ಚನ್ನರಾಯಪಟ್ಟಣ ರೈತರ ನಿಯೋಗ ಇದೀಗ ಮುಖ್ಯಮಂತ್ರಿಗಳ ಭೇಟಿಗೆ ಹೊರಟಿದ್ದು, ರೈತರು ಬೆಳೆದಿರುವ ಹೂ ಹಣ್ಣು ತರಕಾರಿಗಳೊಂದಿಗೆ ಮುಖ್ಯಮಂತ್ರಿ ಗಳ ಭೇಟಿಯಾಗಲಿದ್ದಾರೆ. ನಮ್ಮ ಭೂಮಿ ಸ್ವಾಧೀನ ಪಡಿಸಿಕೊಳ್ಳೊದಕ್ಕೆ ಬಿಡೋದಿಲ್ಲ ಎಂದು ಹೇಳುತ್ತಾ ರೈತರು ಬಸ್ ಮೂಲಕ ಸಿಎಂ ಭೇಟಿಗೆ ಹೊರಟಿದ್ದಾರೆ. ಇದೇ ವೇಳೆ ರೈತರಿಗೆ ಪೊಲೀಸರಿಂದ ಬಂದುಬಸ್ತ್ ಕೂಡ ಮಾಡಲಾಗಿದೆ.

ಇದನ್ನೂ ಓದಿ: Online geam: ಆನ್ ಲೈನ್ ಗೇಮ್ ನಲ್ಲಿ ಲಕ್ಷ ಲಕ್ಷ ಕಳೆದುಕೊಂಡ ಯುವಕ: ವಿಡಿಯೋ ಮಾಡಿಟ್ಟು ಆತ್ಮಹತ್ಯೆಗೆ ಶರಣು!

Comments are closed.