Gujarath :ಅಡುಗೆ ಕೋಣೆಯೇ ಇಲ್ಲದ ಭಾರತದ ವಿಶಿಷ್ಟ ಹಳ್ಳಿ ಇದು – ಇಲ್ಲಿ ಯಾರು ಹಸ್ಕೊಂಡು ಇರಲ್ಲ, ಹಾಗಾದ್ರೆ ಊಟ, ತಿಂಡಿಗೆ ಏನ್ ಮಾಡ್ತಾರೆ ಗೊತ್ತಾ?

Gujarath : ಈ ಊರಲ್ಲಿ ಇರುವವರೆಲ್ಲರೂ ಬರೀ ವಯಸ್ಸಾದ ಅಜ್ಜ ಅಜ್ಜಿಯಂದಿರು. ಇವರ್ಯಾರು ಮನೆಯಲ್ಲಿ ಒಲೆ ಉರಿಸುವುದಿಲ್ಲ. ಆದರೆ ಹಸಿದುಕೊಂಡು ಕೂಡ ಇರಲಾರರು. ಅಲ್ಲದೆ ಇವರಷ್ಟು ನೆಮ್ಮದಿಯ ಜೀವನ ಬೇರೆ ಯಾರು ಮಾಡಲಾರರುಹಾಗಿದ್ರೆ ಇವರೆಲ್ಲ ಹೇಗೆ ಹೊಟ್ಟೆ ತುಂಬಿಸಿಕೊಳ್ಳುತ್ತಾರೆ? ಇವರ ಸಂತೋಷಕ್ಕೆ ಕಾರಣವೇನು? ಇಲ್ಲಿದೆ ನೋಡಿ ಇಂಟರೆಸ್ಟಿಂಗ್ ಸ್ಟೋರಿ.

ಗುಜರಾತ್‌ನ ಮೆಹ್ಸಾನಾ ಜಿಲ್ಲೆಯಲ್ಲಿರುವ ಚಂದಂಕಿ ಒಂದು ವಿಶಿಷ್ಟ ಹಳ್ಳಿ. ಈ ಹಳ್ಳಿಯಲ್ಲಿ ಯಾವುದೇ ಮನೆಯಲ್ಲಿ ಅಡುಗೆ ಮಾಡುವುದಿಲ್ಲ. ಅಷ್ಟೇ ಅಲ್ಲ, ಈ ಗ್ರಾಮದಲ್ಲಿ ವೃದ್ಧರ ಸಂಖ್ಯೆಯೂ ಹೆಚ್ಚಿದೆ. ಮೊದಲು ಈ ಗ್ರಾಮದಲ್ಲಿ 1100 ಜನಸಂಖ್ಯೆ ಇತ್ತು. ಆದರೆ ಜನರು ಉದ್ಯೋಗ ಅರಸಿ ವಲಸೆ ಹೋಗಿದ್ದರಿಂದ ಈಗ ಇಲ್ಲಿ ಕೇವಲ 500 ಜನರು ಮಾತ್ರ ವಾಸಿಸುತ್ತಿದ್ದಾರೆ. ಆದರೆ ಇವರ್ಯಾರು ತಮ್ಮ ಮನೆಯಲ್ಲಿ ಒಲೆ ಹಚ್ಚುವುದಿಲ್ಲ, ಅಡುಗೆ ಮಾಡುವುದಿಲ್ಲ. ಯಾಕೆಂದ್ರೆ ವಿಶಿಷ್ಟ ವ್ಯವಸ್ಥೆಯನ್ನು ಇಲ್ಲಿನ ಜನರು ಮಾಡಿಕೊಂಡಿದ್ದಾರೆ. ಕಮ್ಯುನಿಟಿ ಕಿಚನ್ ಎನ್ನುವ ವಿಶಿಷ್ಟ ವ್ಯವಸ್ಥೆಯಿದ್ದು, ಗ್ರಾಮಸ್ಥರು ಎಲ್ಲರೂ ಸೇರಿ ಒಂದೆಡೆ ಕುಳಿತು ಊಟ ಮಾಡುತ್ತಾರೆ.
ಹೌದು, ಈ ವಿಶಿಷ್ಟ ಗ್ರಾಮದಲ್ಲಿ ಕಮ್ಯುನಿಟಿ ಕಿಚನ್ ಎಂಬ ಒಂದು ವಿಶಿಷ್ಟ ವ್ಯವಸ್ಥೆಯನ್ನು ಮಾಡಿಕೊಂಡಿದ್ದಾರೆ. ಕಮ್ಯುನಿಟಿ ಕಿಚನ್ ಎಸಿ ಹಾಲ್‌ನಲ್ಲಿ ಏಕಕಾಲದಲ್ಲಿ 35-40 ಜನರಿಗೆ ಊಟ ಮಾಡುವ ಸೌಲಭ್ಯವಿದೆ. ಮಧ್ಯಾಹ್ನದ ಊಟದಲ್ಲಿ ದಾಲ್, ಅನ್ನ, ಚಪಾತಿ, ತರಕಾರಿಗಳು ಮತ್ತು ಸಿಹಿತಿಂಡಿಗಳು ಸೇರಿವೆ. ರಾತ್ರಿಯ ಊಟಕ್ಕೆ, ಖಿಚಡಿ-ಕಡಿ, ಭಕ್ರಿ-ರೋಟಿ-ತರಕಾರಿ, ಮೇಥಿ ಗೋಟಾ, ಧೋಕ್ಲಾ ಮತ್ತು ಇಡ್ಲಿ-ಸಾಂಬಾರ್ ನೀಡಲಾಗುತ್ತದೆ.
ಕಮ್ಯುನಿಟಿ ಕಿಚನ್ ಎನ್ನುವ ವಿಶಿಷ್ಟ ವ್ಯವಸ್ಥೆಯನ್ನು ಸ್ಥಾಪಿಸಿದ್ದು ಗ್ರಾಮದ ಸರಪಂಚ್ ಪೂನಂಬಾಯಿ ಪಟೇಲ್ ಎನ್ನುವ ವ್ಯಕ್ತಿ. ಗ್ರಾಮದಲ್ಲಿರುವ ಈ ಹಾಲ್ ನಲ್ಲಿ 35-40 ಜನರು ಒಟ್ಟಿಗೆ ಕುಳಿತು ಊಟ ಮಾಡಬಹುದು. ಇಲ್ಲಿ ಹವಾನಿಯಂತ್ರಿತ ವ್ಯವಸ್ಥೆಯೂ ಇದೆ. ಕಮ್ಯುನಿಟಿ ಕಿಚನ್ ನಲ್ಲಿ ಅಡುಗೆ ಮಾಡಲು ಅಡುಗೆ ಭಟ್ಟರನ್ನು ನೇಮಿಸಿಕೊಳ್ಳಲಾಗಿದ್ದು, ಇವರ ತಿಂಗಳ ಸಂಬಳ ಹನ್ನೊಂದು ಸಾವಿರ ರೂಪಾಯಿಯಂತೆ.
Comments are closed.