Chikkamagaluru: ಗ್ಯಾಸ್‌ ಎಂದು ಮಾತ್ರೆ ನುಂಗಿದ 29 ರ ಹರೆಯದ ಯುವಕ ಹೃದಯಾಘಾತಕ್ಕೆ ಸಾವು

Share the Article

Chikkamagaluru: ಹೃದಯಾಘಾತಕ್ಕೆ ಒಳಗಾಗುತ್ತಿರುವವರ ಸಂಖ್ಯೆ ರಾಜ್ಯದಲ್ಲಿ ಹೆಚ್ಚುತ್ತಿದ್ದು, ಇದೀಗ ಜಿಲ್ಲೆಯಲ್ಲಿ 29 ವರ್ಷ ಪ್ರಾಯದ ತೆಂಗಿನಕಾಯಿ ವ್ಯಾಪಾರಿಯೊಬ್ಬರು ಹೃದಯಾಘಾತದಿಂದ ಸಾವಿಗೀಡಾಗಿದ್ದಾರೆ.

ತರೀಕೆರೆ ತಾಲೂಕಿನ ಶಿವನಿ ಗ್ರಾಮದ 29 ವರ್ಷದ ಹರೀಶ್‌ ಮೃತ ಯುವಕ.

ಹರೀಶ್‌ ಗುರುವಾರ (ಜು 03) ಬೆಳಗಿನ ಜಾವ ವಾಂತಿ ಮಾಡಿಕೊಂಡಿದ್ದರು. ಗ್ಯಾಸ್ಟ್ರಿಕ್‌ ಆಗಿರಬಹುದು ಎಂದು ಮನೆಯವರು ಮಾತ್ರೆ ನುಂಗಿಸಿ ಮಲಗಿಸಿದ್ದರು. ಆದರೆ 3.30ಕ್ಕೆ ಮತ್ತೆ ವಾಂತಿ ಮಾಡಿ ಕುಸಿದು ಬಿದ್ದಿದ್ದು, ಅಜ್ಜಂಪುರ ಆಸ್ಪತ್ರೆಗೆ ಕರೆದೊಯ್ಯುವಷ್ಟರಲ್ಲಿ ಸಾವಿಗೀಡಾಗಿದ್ದಾರೆ.

ಹರೀಶ್‌ ಅವಿವಾಹಿತರಾಗಿದ್ದು, ತೆಂಗಿನಕಾಯಿ ವ್ಯಾಪಾರ ಮಾಡಿಕೊಂಡಿದ್ದರು.

ಇದನ್ನೂ ಓದಿ: Pune: ಯುವತಿ ಮೇಲೆ ಅತ್ಯಾಚಾರ, ಮೊಬೈಲ್‌ನಲ್ಲಿ ಸೆಲ್ಫಿ ತೆಗೆದು, ಮತ್ತೆ ಬರ್ತೀನಿ ನೋಟ್‌ ಬರೆದು ಹೋದ ಡೆಲಿವರಿ ಬಾಯ್‌

Comments are closed.