Icecream : ಪ್ರಪಂಚದ ಟಾಪ್ 100 ಲಿಸ್ಟಲ್ಲಿ ಸ್ಥಾನ ಗಿಟ್ಟಿಸಿಕೊಂಡ ಮಂಗಳೂರಿನ ಈ ಐಸ್ ಕ್ರೀಂ!! ಯಾವುದದು, ಏನಿದರ ವಿಶೇಷ?

Icecream : ಐಸ್ ಕ್ರೀಮ್ ಎಂದರೆ ಯಾರಿಗೆ ತಾನೇ ಇಷ್ಟ ಇಲ್ಲ ಹೇಳಿ. ಚಿಕ್ಕ ಮಕ್ಕಳಿಂದ ಹಿಡಿದು ವೃದ್ಧರೂ ಕೂಡ ಬೇಸಿಗೆ ಸಮಯದಲ್ಲಿ ಐಸ್ ಕ್ರೀಮ್ ತಿನ್ನಲು ಪರಿತಪಿಸುತ್ತಾರೆ. ಜೊತೆಗೆ ನಮ್ಮ ಬಾಲ್ಯದ ನೆನಪುಗಳ ಭಾಗವಾಗಿದೆ, ಬೇಸಿಗೆ ರಜೆಯ ಮಜಾ, ಮತ್ತು ನಮ್ಮ ಪ್ರೀತಿಪಾತ್ರರೊಂದಿಗೆ ಕಳೆದ ವಿಶೇಷ ಕ್ಷಣಗಳು ಎಲ್ಲವನ್ನೂ ಐಸ್ ಕ್ರೀಂ ನೆನಪಿಸುತ್ತೆ. ಇದೀಗ ವಿಶ್ವದ ಟಾಪ್ 100 ಐಸ್ ಕ್ರೀಮ್ ಗಳ ಪಟ್ಟಿಯನ್ನು ತಯಾರಿಸಲಾಗಿದ್ದು ಇದರಲ್ಲಿ ಭಾರತದ ಹಲವು ಬಗೆ ಐಸ್ ಕ್ರೀಂ ಗಳ ಸ್ಥಾನ ಪಡೆದಿದೆ. ಅದರಲ್ಲಿ ನಮ್ಮ ಮಂಗಳೂರಿನ ಐಸ್ ಕ್ರೀಮ್ ಕೂಡ ಸ್ಥಾನವನ್ನು ಗಿಟ್ಟಿಸಿಕೊಂಡಿದೆ.

ಹೌದು, ಮಂಗಳೂರಿನ ‘ಗಡ್ ಬಡ್’ ಐಸ್ ಕ್ರೀಮ್ ವಿಶ್ವದ ಟಾಪ್ 100 ಐಸ್ ಕ್ರೀಮ್ ಗಳ ಪೈಕಿ 33ನೇ ಸ್ಥಾನವನ್ನು ಗಿಟ್ಟಿಸಿಕೊಂಡು ಜಾತಿಯನ್ನು ಪಡೆದುಕೊಂಡಿದೆ. ಹಾಗಿದ್ದರೆ ಕರಾವಳಿಯ ಈ ಗಡ್ ಬಡ್ ವಿಶೇಷತೆ ಏನು? ಇದರ ರುಚಿ ಹೇಗಿರುತ್ತದೆ?
ಕರ್ನಾಟಕದ ಕರಾವಳಿ ನಗರವಾದ ಮಂಗಳೂರಿನಲ್ಲಿ, “ಗಡ್ ಬಡ್” ಕೇವಲ (gudbud icecream) ಐಸ್ ಕ್ರೀಮ್ ಅಲ್ಲ, ಅದು ಒಂದು ಇಮೋಷನ್ ಅಂತಾನೇ ಹೇಳಬಹುದು. ಪಬ್ಬಾಸ್ ರೆಸ್ಟೋರೆಂಟ್ನ ಈ ವಿಶೇಷ ಐಸ್ ಕ್ರೀಮ್ ಅನ್ನು ಗಾಜಿನ ಲೋಟದೊಳಗೆ ಸರ್ವ್ ಮಾಡಲಾಗುತ್ತದೆ. ಇದು ವೆನಿಲ್ಲಾ, ಸ್ಟ್ರಾಬೆರಿ, ಜೆಲ್ಲಿ, ಹಣ್ಣುಗಳು, ಒಣ ಹಣ್ಣುಗಳು ಮತ್ತು ಸಿರಪ್ ಲೇಯರ್ ಗಳನ್ನು ಹೊಂದಿರುತ್ತದೆ. ಪ್ರತಿಯೊಂದು ಚಮಚ ತಿನ್ನುವಾಗಲೂ ವಿಭಿನ್ನ ರುಚಿಯನ್ನು ನೀಡುತ್ತದೆ. ಅದಕ್ಕಾಗಿಯೇ ಇದು ಪ್ರಪಂಚದಾದ್ಯಂತ ಮೆಚ್ಚುಗೆ ಪಡೆದಿದೆ ಮತ್ತು ಇದು 33 ನೇ ಸ್ಥಾನವನ್ನು ಪಡೆದುಕೊಂಡಿತು.
ಇದನ್ನೂ ಓದಿ: Mumbai: 16 ವರ್ಷದ ವಿದ್ಯಾರ್ಥಿಯನ್ನು ರೇಪ್ ಮಾಡಿದ 40 ವರ್ಷದ ಮಹಿಳಾ ಶಿಕ್ಷಕಿ!! ಮುಂದಾಗಿದ್ದೇನು?
Comments are closed.