Bangladesh: ಬಾಂಗ್ಲಾದೇಶದ ಮಾಜಿ ಪ್ರಧಾನಿ ಶೇಖ್ ಹಸೀನಾಗೆ ಆರು ತಿಂಗಳ ಜೈಲು ಶಿಕ್ಷೆ

Bangladesh: ಬಾಂಗ್ಲಾದೇಶದ ಮಾಜಿ ಪ್ರಧಾನಿ ಶೇಖ್ ಹಸೀನಾ ಅವರಿಗೆ ನ್ಯಾಯಾಲಯ ನಿಂದನೆ ಆರೋಪ ಹೊರಿಸಿ ಆರು ತಿಂಗಳ ಜೈಲು ಶಿಕ್ಷೆ ವಿಧಿಸಲಾಗಿದೆ. ಅಂತರರಾಷ್ಟ್ರೀಯ ಅಪರಾಧ ನ್ಯಾಯಮಂಡಳಿ ಶಿಕ್ಷೆಯನ್ನು ಪ್ರಕಟಿಸಿದೆ. ಬುಧವಾರ ಮೂವರು ಸದಸ್ಯರ ಪೀಠ ಈ ತೀರ್ಪು ನೀಡಿದೆ. ಬಾಂಗ್ಲಾದೇಶದ ಮಾಧ್ಯಮಗಳ ಪ್ರಕಾರ, ಅಂತರರಾಷ್ಟ್ರೀಯ ಅಪರಾಧ ನ್ಯಾಯಮಂಡಳಿಯ ಪೀಠದ ನೇತೃತ್ವವನ್ನು ನ್ಯಾಯಮೂರ್ತಿ ಮೊಹಮ್ಮದ್ ಗುಲಾಮ್ ಮುರ್ತಾಜಾ ಮಜುಂದಾರ್ ವಹಿಸಿದ್ದರು. ಶೇಖ್ ಹಸೀನಾ ಅವರಿಗೆ ಜೈಲು ಶಿಕ್ಷೆ ವಿಧಿಸಲಾಗಿರುವುದು ಇದೇ ಮೊದಲು.

ಶೇಖ್ ಹಸೀನಾ ಅವರಿಗೆ ಯಾವ ಪ್ರಕರಣದಲ್ಲಿ ಶಿಕ್ಷೆ ವಿಧಿಸಲಾಯಿತು?
ಮಾಧ್ಯಮ ವರದಿಗಳ ಪ್ರಕಾರ, ಕಳೆದ ವರ್ಷ ಶೇಖ್ ಹಸೀನಾ ಅವರ ಆಡಿಯೋ ಕ್ಲಿಪ್ ಸೋರಿಕೆಯಾಗಿತ್ತು. ಈ ಆಡಿಯೋ ಕ್ಲಿಪ್ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿತ್ತು ಮತ್ತು ನಂತರ ಬಾಂಗ್ಲಾದೇಶದ ಮಾಧ್ಯಮಗಳು ಸಹ ಅದನ್ನು ಪ್ರಸಾರ ಮಾಡಿದ್ದವು. ಈ ಆಡಿಯೋ ಕ್ಲಿಪ್ನಲ್ಲಿ, ಶೇಖ್ ಹಸೀನಾ ಅವರು ಗೋಬಿಂದ್ಗಂಜ್ ಉಪಜಿಲ್ಲಾ ಅಧ್ಯಕ್ಷ ಶಕೀಲ್ ಬುಲ್ಬುಲ್ ಅವರೊಂದಿಗೆ ಮಾತನಾಡುತ್ತಿದ್ದರು ಎಂದು ಹೇಳಲಾಗಿದ್ದು, ಅದರಲ್ಲಿ ಅವರು, ‘ನನ್ನ ವಿರುದ್ಧ 227 ಪ್ರಕರಣಗಳು ದಾಖಲಾಗಿವೆ, ಆದ್ದರಿಂದ ನಾನು 227 ಜನರನ್ನು ಕೊಲ್ಲಲು ಪರವಾನಗಿ ಪಡೆದಿದ್ದೇನೆ’ ಎಂದು ಹೇಳಿದ್ದಾರೆ. ನ್ಯಾಯಾಲಯ ನಿಂದನೆ ಪ್ರಕರಣದಲ್ಲಿ ಅಂತರರಾಷ್ಟ್ರೀಯ ಅಪರಾಧ ನ್ಯಾಯಮಂಡಳಿಯು ಶಕಿಲ್ ಬುಲ್ಬುಲ್ಗೆ ಕೂಡಾ ಎರಡು ತಿಂಗಳ ಜೈಲು ಶಿಕ್ಷೆ ವಿಧಿಸಿದೆ.
Comments are closed.