Maharashtra: ಟೀಚರ್ ಅವಮಾನ ಮಾಡಿದರೆಂದು 10 ನೇ ತರಗತಿಯ ವಿದ್ಯಾರ್ಥಿ ನೇಣು ಬಿಗಿದು ಆತ್ಮಹತ್ಯೆ

Maharashtra: ಟೀಚರ್ ಅವಮಾನ ಮಾಡಿದರೆಂದು 10 ನೇ ತರಗತಿಯ ವಿದ್ಯಾರ್ಥಿಯೊಬ್ಬ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಮಹಾರಾಷ್ಟ್ರದಲ್ಲಿ ನಡೆದಿರುವುದು ವರದಿಯಾಗಿದೆ.

ವಿವೇಕ್ ಮಹದೇವ್ ರಾವುತ್ (15) ಪ್ರಾಣ ಕಳೆದುಕೊಂಡ ವಿದ್ಯಾರ್ಥಿ. ಈತ ಮಹಾರಾಷ್ಟ್ರದ ಅಮರಾವತಿಯಲ್ಲಿರುವ ಜೈ ಬಜರಂಗ್ ವಿದ್ಯಾಲಯದಲ್ಲಿ 10ನೇ ತರಗತಿ ಓದುತ್ತಿದ್ದ.
ಸೂರ್ಯವಂಶಿ ಎನ್ನುವ ಶಿಕ್ಷಕ ಪಠ್ಯದ ಸಂಬಂಧ ಕೆಲ ಪ್ರಶ್ನೆಗಳನ್ನು ಕೇಳಿದ್ದಾರೆ. ಪ್ರಶ್ನೆಗಳಿಗೆ ಉತ್ತರಿಸಲು ಆಗಲಿಲ್ಲ. ಹಾಗಾಗಿ ವಿವೇಕ್‌ಗೆ ಜೋರು ಮಾಡಿದ್ದಾರೆ. ಇದನ್ನು ಕೇಳಿ ಸಹ ವಿದ್ಯಾರ್ಥಿಗಳು ವಿವೇಕ್‌ನನ್ನು ನೋಡಿ ತಮಾಷೆ ಮಾಡಿದ್ದಾರೆ. ಮನನೊಂದ ವಿವೇಕ್ ಮನೆಗೆ ಬಂದು ನೇಣು ಬಿಗಿದುಕೊಂಡಿದ್ದಾನೆ.
ವಿವೇಕ್ ಪತ್ರವೊಂದನ್ನು ಸಾಯುವ ಮೊದಲು ಬರೆದಿದ್ದು, ಅದರಲ್ಲಿ, ” ನಾನು ನೇಣು ಬಿಗಿದುಕೊಳ್ಳುತ್ತಿದ್ದೇನೆ…ಸೂರ್ಯವಂಶಿ ಟೀಚರ್ ನನಗೆ ಬೈಯ್ದಿದ್ದಾರೆ. ನನ್ನ ಹೆತ್ತವರ ಬಗ್ಗೆ ಮಾತನಾಡಿದ್ದಾರೆ. ನಾನು ನೇಣು ಹಾಕಿಕೊಳ್ಳುತ್ತಿದ್ದೇನೆʼ ಎಂದು ಬರೆದಿದ್ದಾನೆ.
ಶಿಕ್ಷಕನ ವಿರುದ್ಧ ಪೊಲೀಸ್ ಪ್ರಕರಣ ದಾಖಲಾಗಿದೆ. ತನಿಖೆ ನಡೆಯುತ್ತಿದೆ.
Comments are closed.