Bengaluru: 30 ವರ್ಷದಿಂದ ತಲೆಮರೆಸಿಕೊಂಡಿದ್ದ ಬೆಂಗಳೂರು ಸ್ಫೋಟದ ಉಗ್ರ ಅರೆಸ್ಟ್!

Bengaluru: ಬೆಂಗಳೂರು ನಗರ ಸೇರಿ ದಕ್ಷಿಣ ಭಾರತದ ಹಲವು ಬಾಂಬ್ ಸ್ಫೋಟಗಳ ಪ್ರಮುಖ ಸೂತ್ರಧಾರಿಯನ್ನು 30 ವರ್ಷಗಳ ಬಳಿಕ ತಮಿಳುನಾಡು ಪೊಲೀಸರು ಬಂಧಿಸಿದ್ದಾರೆ.

ತಮಿಳುನಾಡಿನ ನಾಗೂರು ನಿವಾಸಿ ಅಬೂಬಕರ್ ಸಿದ್ದಿಕ್ (60) ಬಂಧಿತ ಉಗ್ರ. ಬಂಧಿತ ಉಗ್ರನು 1995ರಿಂದ ತಲೆ ಮರೆಸಿಕೊಂಡಿದ್ದನು. ಇದೀಗ ಆತನನ್ನು ತಮಿಳುನಾಡು ಪೊಲೀಸರು ಆಂಧ್ರಪ್ರದೇಶದ ಅನ್ನಮಯ ಜಿಲ್ಲೆಯಲ್ಲಿ ಬಂಧಿಸಿದ್ದಾರೆ. ಈತನು ನಿಷೇಧಿತ ಸಂಘಟನೆಗಳಾದ ತಮಿಳುನಾಡಿದ ಅಲ್ ಉಮ್ಮ ಸೇರಿ ಹಲವು ಸಂಘಟನೆಗಳಿಗೆ ನೇಮಕಾತಿ ಮಾಡುತ್ತಿದ್ದ ಆರೋಪಿಯಾಗಿದ್ದ. ಈತನ ಜೊತೆಗಿದ್ದ ಮೊಹಮ್ಮದ್ ಅಲಿಯನ್ನು ಕೂಡಾ ಪೊಲೀಸರು ಬಂಧಿಸಿದ್ದಾರೆ. ಈತ 1999ರಿಂದ ತಲೆ ಮರೆಸಿಕೊಂಡಿದ್ದ ಎಂದು ತಿಳಿದುಬಂದಿದೆ.
Comments are closed.