Suicide: ಪೋಷಕರು ಆಟಕ್ಕಿಂತ ಓದು ಮುಖ್ಯ ಎಂದಿದ್ದೆ ತಪ್ಪಾಯ್ತು?! 14 ವರ್ಷದ ಬಾಲಕ ಆತ್ಮಹತ್ಯೆ!

Suicide: ಪೋಷಕರು ಮನೆಯಲ್ಲೇ ಇದ್ದು ಓದು, ಎಲ್ಲಿಗೂ ಹೋಗಬೇಡ ಎಂದು ಹೇಳಿದ್ದಕ್ಕೆ ಬಾಲಕ ಮನನೊಂದು ಆತ್ಮಹತ್ಯೆ ಮಾಡಿಕೊಂಡಿದ್ದಾನೆ.

ಶಿವಮೊಗ್ಗ ಜಿಲ್ಲೆಯ ತುಂಬೆ ಗ್ರಾಮದಲ್ಲಿ ನಿಖಿಲ್ (14) ಆತ್ಮಹತ್ಯೆ( Suicide) ಮಾಡಿಕೊಂಡ ಬಾಲಕ ಎಂದು ತಿಳಿದುಬಂದಿದೆ. ನಿಖಿಲ್ ಸ್ನೇಹಿತರೊಂದಿಗೆ ಕ್ರಿಕೆಟ್ ಆಡಲು ಹೊರಗಡೆ ಹೋಗುತ್ತೇನೆ ಎಂದು ಪೋಷಕರಲ್ಲಿ ಹೇಳಿದ್ದನು. ಆದರೆ ಪೋಷಕರು ಮನೆಯಲ್ಲೇ ಇದ್ದು ಒದಿಕೊಳ್ಳುವಂತೆ ತಿಳಿಸಿದ್ದರು.
ಇದರಿಂದ ಬಾಲಕ ನಿಖಿಲ್ ಮನನೊಂದು ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಈ ಸಂಬಂಧ ಸಾಗರ ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
Comments are closed.