Puttur: ಪುತ್ತೂರು ಗ್ರಾಮಾಂತರ ಠಾಣೆಯ ಎಎಸ್‌ಐ ಮಹಮ್ಮದಾಲಿ ಸೇವಾ ನಿವೃತ್ತಿ

Share the Article

Puttur: ಪುತ್ತೂರು (Puttur) ಗ್ರಾಮಾಂತರ ಠಾಣೆಯ ಎಎಸ್‌ಐ ಮಹಮ್ಮದಾಲಿಯವರು ಜೂ. 30ರಂದು ಸೇವಾ ನಿವೃತ್ತಿಯಾಗಿದ್ದಾರೆ.

1993ರಲ್ಲಿ ಪೊಲೀಸ್ ಕಾನ್ಸೆಬಲ್ ಆಗಿ ಪೊಲೀಸ್‌ ಇಲಾಖೆಗೆ ಸೇರಿದ ಇವರು ಆರಂಭದಲ್ಲಿ ಸಂಚಾರ ಪೂರ್ವ ಠಾಣೆ ಮಂಗಳೂರು, ಕಡಬ ಪೊಲೀಸ್‌ ಠಾಣೆಯಲ್ಲಿ ಕರ್ತವ್ಯ ಸಲ್ಲಿಸಿ ಪುತ್ತೂರು ನಗರ ಠಾಣೆ ಹೆಡ್ ಕಾನ್ಸೆಬಲ್ ಆಗಿ ಭಡ್ತಿಗೊಂಡರು. ಬಳಿಕ ಸುಳ್ಯ ಪೊಲೀಸ್‌ ಠಾಣೆಯಲ್ಲಿ ಕರ್ತವ್ಯ ನಿರ್ವಹಿಸಿ, ಕಡಬ ಪೊಲೀಸ್‌ ಠಾಣೆಯಲ್ಲಿ ಎಎಸ್‌ಐ ಯಾಗಿ ಭಡ್ತಿಗೊಂಡರು. ಬಳಿಕ ಪುತ್ತೂರು ಗ್ರಾಮಾಂತರ ಠಾಣೆಯಲ್ಲಿ ಸೇವೆಯಲ್ಲಿದ್ದ ಇವರು ಸುದೀರ್ಘ 32 ವರ್ಷಗಳ ಸೇವೆಯಿಂದ ನಿವೃತ್ತರಾಗಿದ್ದಾರೆ.

ಇದನ್ನೂ ಓದಿ: Mangaluru: ಮಂಗಳೂರು: ಮೂಲ್ಕಿಯಲ್ಲಿ ನಡೆದ ಅಬ್ದುಲ್ ಲತೀಫ್ ಕೊಲೆ ಪ್ರಕರಣ: ಮೂರು ವರ್ಷದಿಂದ ತಲೆಮರೆಸಿಕೊಂಡಿದ್ದ ಆರೋಪಿಯ ಬಂಧನ!

Comments are closed.