School: ಸರ್ಕಾರಿ ಶಿಕ್ಷಣ ಸಂಸ್ಥೆ ಉಳಿಸಲು ಹತ್ತು ಲಕ್ಷಕ್ಕೂ ಅಧಿಕ ಜನರಿಂದ ಸಹಿ!

Share the Article

School: ಸರ್ಕಾರಿ ಶಿಕ್ಷಣ ಸಂಸ್ಥೆಗಳನ್ನು

‘ಸಾರ್ವಜನಿಕ ಶಿಕ್ಷಣ ಉಳಿಸಿ’ ಎಂಬ ಧೈಯದಡಿ ಉಳಿಸಲು ಮತ್ತು ಬಲಪಡಿಸಲು ಕೈಗೊಂಡ 50 ಲಕ್ಷ ಸಹಿ ಸಂಗ್ರಹ ಅಭಿಯಾನದಲ್ಲಿ ಈಗಾಗಲೇ 10 ಲಕ್ಷಗಳಷ್ಟು ಸಹಿ ಸಂಗ್ರಹ ಮಾಡಲಾಗಿದೆ ಎಂದು AIDSO ಜಿಲ್ಲಾ ಸಹ ಸಂಚಾಲಕಿ ಸ್ವಾತಿ ಅವರು ತಿಳಿಸಿದ್ದಾರೆ.

ಕರ್ನಾಟಕ ಸರ್ಕಾರ 6,200 ಸರ್ಕಾರಿ ಶಾಲೆಗಳನ್ನು ಹಬ್ ಆ್ಯಂಡ್ ಸ್ಪೋಕ್ ಮಾದರಿಯಡಿ ಸಂಯೋಜನೆಯ ಹೆಸರಲ್ಲಿ ಮುಚ್ಚುವ ಜನ ವಿರೋಧಿ ನಡೆ ಪ್ರದರ್ಶಿಸಿದೆ. ಸರ್ಕಾರದ ಈ ನಿಲುವಿನ ವಿರುದ್ಧ ವಿದ್ಯಾರ್ಥಿಗಳು, ಪೋಷಕರು, ಶಿಕ್ಷಕರು ಜೊತೆಗೆ ಶಿಕ್ಷಣ ಪ್ರೇಮಿಗಳು ಸಹಿ ಅಭಿಯಾನದಪ್ರತಿ ಸಹಿ ಕೇವಲ ಶಾಯಿಯಲ್ಲ. ಬದಲಾಗಿ ಹಾಳೆಗಳ ಮೇಲೆ ವಿದ್ಯಾರ್ಥಿಗಳಿಗೆ ಉಚಿತ ಮತ್ತು ಗುಣಮಟ್ಟದ ಶಿಕ್ಷಣ ದೊರೆಯುವಂತೆ ಮಾಡಲು ಹೋರಾಡುತ್ತಿರುವವರ ಹೃದಯದ ದನಿಯಾಗಿದೆ. ಹತ್ತು ಲಕ್ಷ ಸಹಿ ದಾಟಿರುವುದು ನಮಗೆ ಮತ್ತಷ್ಟು ಶಕ್ತಿ ತುಂಬಿದೆ ಎಂದಿದ್ದಾರೆ.

ಇದನ್ನೂ ಓದಿ: B R Patil: ಸಿದ್ದರಾಮಯ್ಯ ಒಬ್ಬ ಅಡ್ಜಸ್ಟ್ಮೆಂಟ್ ರಾಜಕಾರಣಿ – ಕಾಂಗ್ರೆಸ್ ಶಾಸಕನಿಂದಲೇ ಆರೋಪ

Comments are closed.