Rape: ನಾಲ್ಕು ತಿಂಗಳ ಗರ್ಭಿಣಿ ಮೇಲೆ ಭೂತ ಬಿಡಿಸುವ ನೆಪದಲ್ಲಿ ಸಾಮೂಹಿಕ ಅತ್ಯಾಚಾರ

Share the Article

Rape: ನಾಲ್ಕು ತಿಂಗಳ ಗರ್ಭಿಣಿ ಮೇಲೆ ಭೂತ ಬಿಡಿಸುವ ನೆಪದಲ್ಲಿ ಸಾಮೂಹಿಕ ಅತ್ಯಾಚಾರ ನಡೆದಿರುವ ಘಟನೆ ಬಿಹಾರದ ಮುಜಾಫರ್‌ಪುರದಲ್ಲಿ ನಡೆದಿದೆ.

ಗರ್ಭಿಣಿಯಾದಾಗಿನಿಂದ ಮಹಿಳೆ ಅನಾರೋಗ್ಯಕ್ಕೆ ಒಳಗಾಗಿದ್ದು, ಕುಟುಂಬದವರು ಮೂಢನಂಬಿಕೆಯಿಂದ ಮಾಂತ್ರಿಕನ ಬಳಿ ಕರೆದುಕೊಂಡು ಹೋಗಿದ್ದು, ಅಲ್ಲಿ ಮಾಂತ್ರಿಕ ಆಕೆಯ ಮಾವನನ್ನು ಹೊರಗಡೆ ಕೂರುವಂತೆ ಹೇಳಿ ಮಹಿಳೆಯನ್ನು ಒಳಗೆ ಕರೆದುಕೊಂಡು ಹೋಗಿ ತನ್ನ ಸಹಚರರ ಜೊತೆ ಸೇರಿ ಸಾಮೂಹಿಕ ಅತ್ಯಾಚಾರವೆಸಗಿದ್ದಾನೆ ಎಂದು ವರದಿಯಾಗಿದೆ.

ಶಿವೈಪಟ್ಟಿ ಪೊಲೀಸ್‌ ಠಾಣೆ ಪ್ರದೇಶದ ಮಧೇರಾ ಗ್ರಾಮದಲ್ಲಿರುವ ಮಾಂತ್ರಿಕನ ಬಳಿಗೆ ಭೂತ ಬಿಡಿಸಲು ಕರೆದೊಯ್ದಿದ್ದು, ಆಗ ಈ ಘಟನೆ ನಡೆದಿದೆ. ಅತ್ಯಾಚಾರ ನಡೆದಿರುವ ಕುರಿತು ಮಹಿಳೆ ಭಯದಿಂದ ಇದನ್ನು ಯಾರಿಗೂ ಹೇಳಿರಲಿಲ್ಲ. ಆದರೆ ಮತ್ತೊಮ್ಮೆ ಕರೆದುಕೊಂಡು ಹೋದಾಗ ಮಾಡಿದ್ದ, ಮೂರನೇ ಬಾರಿ ಕರೆದೊಯ್ದಾಗ ಆತ ಇದೇ ಕೆಲಸವನ್ನು ಮಾಡಲು ಮುಂದಾದಾಗ ಆಕೆ ತನ್ನ ಕುಟುಂಬದವರಲ್ಲಿ ಹೇಳಿದ್ದಾಳೆ.

ಮಹಿಳೆಯ ಆರೋಗ್ಯ ತೀರಾ ಹದಗೆಟ್ಟಿದ್ದು, ಕೂಡಲೇ ಆಸ್ಪತ್ರೆಗೆ ದಾಖಲಿಸಿ ಕುಟುಂಬದವರಿಗೆ ಮಾಹಿತಿ ನೀಡಲಾಗಿದೆ. ಶಿವಾಯಿಪಟ್ಟಿ ಪೊಲೀಸ್‌ ಠಾಣೆಗೂ ಮಾಹಿತಿ ನೀಡಲಾಗಿದ್ದು, ಪ್ರಕರಣದ ತನಿಖೆ ನಡೆಯುತ್ತಿದೆ.

ಇದನ್ನೂ ಓದಿ: Shocking News: ಒಂಟಿತನದಿಂದ ಪ್ರತೀ ಗಂಟೆಗೆ 100 ಸಾವು! ಅಷ್ಟಕ್ಕೂ ವಿಶ್ವ ಆರೋಗ್ಯ ಸಂಸ್ಥೆ ವರದಿಯಲ್ಲಿ ಏನಿದೆ?!

Comments are closed.