High Court: ವಾಲ್ಮೀಕಿ ನಿಗಮ ಹಗರಣ ತನಿಖೆ ಇನ್ನು CBI ಗೆ – ಹೈಕೋರ್ಟ್ ಮಹತ್ವದ ಆದೇಶ, ಹಲವರಿಗೆ ಶುರುವಾಯ್ತು ಢವ ಢವ

Share the Article

High Court : ವಾಲ್ಮೀಕಿ ನಿಗಮದಲ್ಲಿ (valmiki corporation) ಕೋಟ್ಯಂತರ ರೂಪಾಯಿ ಹಗರಣ ಪ್ರಕರಣ ಮತ್ತೆ ಸದ್ದು ಮಾಡುತ್ತಿದೆ. ಇದೀಗ ವಾಲ್ಮೀಕಿ ನಿಗಮ ಹಗರಣದ ತನಿಖೆ ಹೊಣೆಯನ್ನಯ ಸಿಬಿಐಗೆ (cbi) ವಹಿಸಿ ಹೈಕೋರ್ಟ್​ನಿಂದ ಮಹತ್ವದ ಆದೇಶ ನೀಡಿದೆ.

ಹೌದು, ಮಹರ್ಷಿ ವಾಲ್ಮೀಕಿ ಪರಿಶಿಷ್ಟ ಪಂಗಡಗಳ ಅಭಿವೃದ್ಧಿ ನಿಗಮದಲ್ಲಿ ನಡೆದ (Maharshi Valmiki Scheduled Tribes Development Corporation Limited) ಅಕ್ರಮ ಹಣ ವರ್ಗಾವಣೆ (Illegal Money Transfer) ಪ್ರಕರಣದ ತನಿಖೆಯನ್ನು ಸಿಬಿಐಗೆ ವರ್ಗಾಯಿಸುವಂತೆ ಹೈಕೋರ್ಟ್​ ಎಸ್​ಐಟಿಗೆ ಸೂಚನೆ ನೀಡಿದೆ. ಇದರೊಂದಿಗೆ ವಾಲ್ಮೀಕಿ ಹಗರಣದಲ್ಲಿ ಸರ್ಕಾರ ಹಾಗೂ ಮಾಜಿ ಸಚಿವ ನಾಗೇಂದ್ರಗೂ (b nagendra) ಬಿಗ್ ಶಾಕ್ ಎದುರಾಗಿದೆ.

ಇಂದು ವಾಲ್ಮೀಕಿ ಅಭಿವೃದ್ಧಿ ನಿಗಮದ ಹಗರಣವನ್ನು ಸಿಬಿಐ ತನಿಖೆಗೆ ಕೋರಿದ್ದಂತ ಅರ್ಜಿಯನ್ನು ಕರ್ನಾಟಕ ಹೈಕೋರ್ಟ್ ನ್ಯಾಯಮೂರ್ತಿ ಎಂ ನಾಗಪ್ರಸನ್ನ ಅವರಿದ್ದಂತ ನ್ಯಾಯಪೀಠವು ವಿಚಾರಣೆ ನಡೆಸಿತು. ವಹಿಸಬೇಕೆಂದು ರಾಜ್ಯ ಬಿಜೆಪಿ ನಾಯಕರು ಸಲ್ಲಿಸಿದ್ದಂತ ಅರ್ಜಿಯನ್ನು ಮಾನ್ಯ ಮಾಡಿತು. ಅಂತಿಮವಾಗಿ ವಾಲ್ಮೀಕಿ ನಿಗಮದ ಹಗರಣ ಸಂಬಂಧ 187 ಕೋಟಿ ರೂಪಾಯಿ ಅವ್ಯವಹಾರದ ಬಗ್ಗೆ ರಾಜ್ಯ ಬಿಜೆಪಿ ನಾಯಕರು ಕೋರಿದಂತೆ ಸಿಬಿಐ ತನಿಖೆಗೆ ಹೈಕೋರ್ಟ್ ಆದೇಶಿತು. ಹೀಗಾಗಿ ವಾಲ್ಮೀಕಿ ನಿಗಮದ ಹಗರಣವನ್ನು ಇನ್ಮುಂದೆ ಸಿಬಿಐ ತನಿಖೆ ನಡೆಸಲಿದೆ.

 ಏನಿದು ವಾಲ್ಮೀಕಿ ಹಗರಣ?

ವಾಲ್ಮೀಕಿ ಹಗರಣವು 2024 ರಲ್ಲಿ ಕರ್ನಾಟಕದಲ್ಲಿ ಬೆಳಕಿಗೆ ಬಂದ ಒಂದು ದೊಡ್ಡ ಆರ್ಥಿಕ ವಂಚನೆ ಹಗರಣವಾಗಿದೆ. ವಾಲ್ಮೀಕಿ ನಿಗಮದ ಅಧೀಕ್ಷಕ ಚಂದ್ರಶೇಖರನ್. ಪಿ (52) ವಾಲ್ಮೀಕಿ ನಿಗಮದ ಅನುದಾನದ ಹಣವು ದುರುಪಯೋಗವಾಗಿದೆ ಎಂದು ಆರೋಪಿಸಿ,ಮೇ 26 ರಂದು 5 ಪುಟಗಳ ಡೆತ್ ನೋಟ್ ಬರೆದುಬಿಟ್ಟು ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದರು.

ಮೃತರ ಪತ್ನಿಯು ನೀಡಿದ ದೂರಿನ ಮೇರೆಗೆ ಶಿವಮೊಗ್ಗದ ವಿನೋಬನಗರ ಪೊಲೀಸ್ ಠಾಣೆಯಲ್ಲಿ ಕ್ರಿಮಿನಲ್ ಪ್ರಕರಣ ದಾಖಲಾಗಿತ್ತು. ಜತೆಗೆ ನಿಗಮದಲ್ಲಿ ಅನುದಾನ ಹಣವು ಬ್ಯಾಂಕ್ ಮೂಲಕ ದುರ್ಬಳಕೆಯಾಗಿರುವುದಾಗಿ ಅಧಿಕಾರಿ ನೀಡಿದ ದೂರಿನ ಆಧಾರದ ಮೇಲೆ ಬೆಂಗಳೂರು ನಗರದ ಹೈಗೌಂಡ್ ಪೊಲೀಸ್ ಠಾಣೆಯಲ್ಲಿ ಕ್ರಿಮಿನಲ್ ಮೊಕದ್ದಮೆ ದಾಖಲಿಸಿದ್ದರು.

Comments are closed.