Udupi: ಪ್ರೀತಿಗೆ ಮನೆಯವರ ವಿರೋಧ: ಕೇರಳದಲ್ಲಿ ಮನೆ ಬಿಟ್ಟು ಹೋಗಿದ್ದ ಜೋಡಿ ಉಡುಪಿಯಲ್ಲಿ ಪತ್ತೆ!

Udupi: ಕೇರಳದ ಕುಂಬಳೆಯಲ್ಲಿ ಪರಸ್ಪರ ಪ್ರೀತಿಸುತ್ತಿದ್ದ ಪ್ರೇಮಿಗಳಿಗೆ ಮನೆಯವರು ವಿರೋಧ ಇದ್ದ ಕಾರಣ, ಯಾರಿಗೂ ಹೇಳದೆ ನಾಪತ್ತೆಯಾಗಿದ್ದ ಪ್ರೇಮಿಗಳನ್ನು ಉಡುಪಿಯ ಇಂದ್ರಾಳಿ ರೈಲ್ವೇ ನಿಲ್ದಾಣದಲ್ಲಿ ರಕ್ಷಿಸಿರುವ ಘಟನೆ ನಡೆದಿದೆ.

ಕೇರಳದಿಂದ ಮುಂಬೈಗೆ ತೆರಳುತ್ತಿದ್ದ ರೈಲಿನಲ್ಲಿ ಆರ್ ಪಿಎಫ್ ಸುನಿಲ್ ಅವರು ಗಸ್ತು ಕರ್ತವ್ಯದಲ್ಲಿದ್ದರು. ಈ ಸಂದರ್ಭ ಅದೇ ರೈಲಿನಲ್ಲಿ ಪ್ರಯಾಣಿಸುತ್ತಿದ್ದ ಈ ಜೋಡಿ ಮೇಲೆ ಸಂಶಯಗೊಂಡು ವಿಚಾರಿಸಿದಾಗ ಪ್ರಕರಣ ಬೆಳಕಿಗೆ ಬಂದಿದೆ.
ಅವರನ್ನು ಇಂದ್ರಾಳಿ ರೈಲ್ವೇ ನಿಲ್ದಾಣದಲ್ಲಿ ಇಳಿಸಿ ಇವರ ವಯಸ್ಸಿನಲ್ಲಿ ಅನುಮಾನ ಇದ್ದುದರಿಂದ ಮಕ್ಕಳ ಸಹಾಯವಾಣಿಗೆ ಮಾಹಿತಿ ನೀಡಿ ಉಡುಪಿ ಠಾಣೆಗೆ ಕರೆದೊಯ್ದು ಬಳಿಕ ಕುಂಬಳೆ ಪೊಲೀಸರಿಗೆ ಈ ಪ್ರೇಮಿಗಳನ್ನು ಒಪ್ಪಿಸಲಾಯಿತು.
ಇದನ್ನೂ ಓದಿ: Shimogga: ಶಿವಮೊಗ್ಗದಲ್ಲಿ ʼಹಾರ್ಟ್ ಅಟ್ಯಾಕ್ʼ ಗೆ ವೈದ್ಯ ಸಾವು
Comments are closed.