Bangalore: ರಾಜಕಾರಣಿಗಳ ಜೊತೆ ಮಲಗು ಎಂದು ಹಿಂಸೆ ಕೊಡುವ ಗಂಡ, ಪೊಲೀಸರ ಮೊರೆ ಹೋದ ಮಹಿಳೆ

Bangalore: ಬನಶಂಕರಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಗಂಡನೋರ್ವ ರಾಜಕಾರಣಿಗಳ ಜೊತೆ ಹಾಗೂ ಸಹಚರರ ಜೊತೆ ಮಲಗುವಂತೆ ಒತ್ತಾಯ ಮಾಡಿರುವ ಘಟನೆ ವರದಿಯಾಗಿದೆ. ಆರು ಬಾರಿ ತಲಾಖ್ ನೀಡಿ, ಅಬಾರ್ಷನ್ ಮಾಡಿಸಿದ ಆರೋಪದಲ್ಲಿ ಪತಿಯ ವಿರುದ್ಧವೇ ಮಹಿಳೆ ಪೊಲೀಸರಿಗೆ ದೂರನ್ನು ನೀಡಿದ್ದಾರೆ.

ಇದರ ಜೊತೆಗೆ ವರದಕ್ಷಿಣೆ ಕೇಸನ್ನೂ ಕೂಡಾ ದಾಖಲು ಮಾಡಲಾಗಿದೆ. ಅತ್ತೆ-ಮಾವನ ವಿರುದ್ಧ ದೂರು ದಾಖಲಾಗಿದೆ. ಸಂತ್ರಸ್ತೆ ನೀಡಿದ ದೂರಿನ ಆಧಾರದಲ್ಲಿ ಬನಶಂಕರಿ ಠಾಣೆ ಪೊಲೀಸರು ಎಫ್‌ಐಆರ್ ದಾಖಲು ಮಾಡಿದ್ದಾರೆ ಎಂದು ಟಿವಿ9 ವರದಿ ಮಾಡಿದೆ.
ಸಂತ್ರಸ್ತೆ 2021 ರಲ್ಲಿ ಆರೋಪಿ ಯೂನಸ್ ಪಾಷಾ ಎಂಬಾತನನ್ನು ಮದುವೆಯಾಗಿದ್ದರು. ನಾಲ್ಕು ತಿಂಗಳ ನಂತರ ಆರೋಪಿ ಯೂನಸ್ ಪಾಷಾ, ಆತನ ತಂದೆ ಚಿಂದ್ ಪಾಷಾ, ತಾಯಿ ಪಹೀನ್ ತಾಜ್ ಸೇರಿ ಸಂತ್ರಸ್ತೆಗೆ ಹಿಂಸೆ ನೀಡಲು ಪ್ರಾರಂಭಿಸಿದ್ದಾರೆ. ಸಂತ್ರಸ್ತೆ ಈ ಮಧ್ಯೆ ಗರ್ಭಿಣಿಯಾಗಿದ್ದು, ಆರೋಪಿ ಗಂಡ ಆಕೆಯ ಹೊಟ್ಟೆಯ ಮೇಲೆ ಒದ್ದು ಹಲ್ಲೆ ಮಾಡಿದ ಪರಿಣಾಮ 2021 ರಲ್ಲೇ ಆಕೆಯನ್ನು ಹೆದರಿಸಿ ಗರ್ಭಪಾತ ಮಾಡಿಸಿದ್ದಾನೆ ಎಂದು ವರದಿಯಾಗಿದೆ.
ಪತ್ನಿಯ ತಲೆಗೆ ಗನ್ ಇಟ್ಟು ಹೆದರಿಸುತ್ತಿದ್ದು, ಮಾತ್ರವಲ್ಲದೇ ಸಂತ್ರಸ್ತೆಯ ತಂದೆ ಕುಟುಂಬದವರನ್ನು ಕೊಲೆ ಮಾಡುವುದಾಗಿ ಬೆದರಿಕೆ ಹಾಕುತ್ತಿರುವುದಾಗಿ ಎಫ್‌ಐಆರ್‌ನಲ್ಲಿ ತಿಳಿಸಲಾಗಿದೆ. ಆರೋಪಿಗೆ ರಾಜಕಾರಣಿಗಳು, ಸ್ಥಳೀಯ ರೌಡಿಗಳ ನಂಟು ಇದ್ದು, ಪತ್ನಿಯನ್ನು ರಾಜಕಾರಣಿ ಸ್ನೇಹಿತನಿಗೆ ಮಾರಾಟ ಮಾಡಲು ಪ್ರಯತ್ನ ಮಾಡಿದ್ದಾನೆ ಎಂದು ತಿಳಿದ ಸಂತ್ರಸ್ತೆ ಕಳೆದ ಎರಡು ತಿಂಗಳಿನಿಂದ ಗಂಡನ ಮನೆ ಬಿಟ್ಟು ಬಂದು ತಾಯಿ ಮನೆಯಲ್ಲಿ ವಾಸವಿದ್ದೇನೆ ಎಂದು ಎಫ್‌ಐಆರ್‌ನಲ್ಲಿ ಉಲ್ಲೇಖ ಮಾಡಲಾಗಿದೆ.
ಕೃಪೆ: ಟಿವಿ9 ಕನ್ನಡ ವರದಿ
ಇದನ್ನೂ ಓದಿ: Good news: ಕೃಷಿ ಭೂಮಿಯಲ್ಲಿನ ಮರ ಕಡಿಯಲು ನಿಯಮ ಸರಳೀಕರಣ!
Comments are closed.