BJP MLA resigns: ಬಿಜೆಪಿಗೆ ಫೈರ್ ಬ್ರಾಂಡ್ ಶಾಸಕ ರಾಜೀನಾಮೆ

Share the Article

ಹೈದರಾಬಾದ್: ಬಿಜೆಪಿ ಪಕ್ಷದ ಫೈರ್ ಬ್ರಾಂಡ್, ಹಿಂದುತ್ವವಾದಿ ಶಾಸಕ, ತೆಲಂಗಾಣದ ಟಿ. ರಾಜಾ ಸಿಂಗ್ ಪಕ್ಷಕ್ಕೆ ಗುಡ್ ಬೈ ಹೇಳಿದ್ದಾರೆ. ತೆಲಂಗಾಣದ ಗೋಶಾಮಹಲ್ ಕ್ಷೇತ್ರದ ಶಾಸಕ ರಾಜಾ ಸಿಂಗ್ ಪಕ್ಷದ ಪ್ರಾಥಮಿಕ ಸದಸ್ಯತ್ವಕ್ಕೆ ದಿಢೀರ್ ರಾಜಿನಾಮೆ ನೀಡಿದ್ದು, ಅವರ ರಾಜಿನಾಮೆ ವಿಚಾರ ರಾಜಕೀಯ ವಲಯದಲ್ಲಿ ಸಂಚಲನ ಮೂಡಿಸಿದೆ.

ಪ್ರಚೋದನಾತ್ಮಕ ಭಾಷಣ ಮತ್ತು ಕೋಮುವಾದಿ ಎಂದು ದೂರಲಾಗುವ ಅವರ ಹೇಳಿಕೆಗಳ ಬಗ್ಗೆ ಆಗಾಗ್ಗೆ ಸುದ್ದಿಯಾಗುತ್ತಿದ್ದ ತೆಲಂಗಾಣದ ವಿವಾದಾತ್ಮಕ ನಾಯಕ ಟಿ ರಾಜಾ ಸಿಂಗ್ ಬಿಜೆಪಿಗೆ ರಾಜೀನಾಮೆ ನೀಡಿದ್ದಾರೆ. ಈ ಕುರಿತು ಕೇಂದ್ರ ಸಚಿವರೂ, ರಾಜ್ಯ ಬಿಜೆಪಿ ಮುಖ್ಯಸ್ಥ ಜಿ ಕಿಶನ್ ರೆಡ್ಡಿ ಅವರಿಗೆ ಟಿ ರಾಜಾ ಸಿಂಗ್ ಪತ್ರ ಬರೆದು ತಿಳಿಸಿದ್ದಾರೆ ಎನ್ನಲಾಗಿದೆ. Raajieenamege ಅಲ್ಲದೆ ತೆಲಂಗಾಣದ ಪಕ್ಷದ ಕಚೇರಿಗೆ ಆಗಮಿಸಿ ಸಾಕಷ್ಟು ಸಮಯ ನಾಯಕರೊಂದಿಗೆ ಚರ್ಚಿಸಿ ಬಳಿಕ ತಮ್ಮ ಪ್ರಾಥಮಿಕ ಸದಸ್ಯತ್ವಕ್ಕೆ ರಾಜಿನಾಮೆ ನೀಡಿದ್ದಾರೆ ಎಂದು ಹೇಳಲಾಗಿದೆ. (Telangana MLA T Raja Singh Quits BJP)

ಈ ಶಾಸಕ ರಾಜಾ ಸಿಂಗ್ ತೆಲಂಗಾಣ ಬಿಜೆಪಿ ರಾಜ್ಯಾಧ್ಯಕ್ಷ ಹುದ್ದೆಯ ಆಕಾಂಕ್ಷಿಯಾಗಿದ್ದರು. ಇನ್ನೂ ಅಧಿಕೃತ ಘೋಷಣೆ ಹೊರಬಂದಿಲ್ಲವಾದರೂ, ಬಿಜೆಪಿ ಹೈಕಮಾಂಡ್ ಎನ್ ರಾಮಚಂದರ್ ರಾವ್ ರನ್ನು ಮುಂದಿನ ರಾಜ್ಯ ಘಟಕದ ಮುಖ್ಯಸ್ಥರನ್ನಾಗಿ ಆಯ್ಕೆ ಮಾಡಿದೆ ಎನ್ನಲಾಗುತ್ತಿದೆ. ರಾಮಚಂದ್ರ ರಾವ್ ಆಯ್ಕೆಗೆ ಶಾಸಕ ರಾಜಾ ಸಿಂಗ್ ಬಹಿರಂಗವಾಗಿಯೇ ವಿರೋಧ ವ್ಯಕ್ತಪಡಿಸಿದ್ದರು, ಜತೆಗೆ ಈಗ ಪಕ್ಷದ ಮೇಲೆಯೇ ಮುನಿಸಿಕೊಂಡು ಈ ರಾಜೀನಾಮೆ ನಿರ್ಧಾರ ಕೈಗೊಂಡಿದ್ದಾರೆ ಎನ್ನಲಾಗುತ್ತಿದೆ.

‘ರಾಮಚಂದ್ರ ರಾವ್ ರಿಗೆ ಪಕ್ಷದ ಅಧಿಕಾರ ಹಸ್ತಾಂತರದಿಂದ ನನಗೆ ತೀವ್ರ ಅಸಮಾಧಾನವಾಗಿದೆ. ನಾನು ಕೂಡಾ ಬಿಜೆಪಿ ಅಧ್ಯಕ್ಷ ಸ್ಥಾನಕ್ಕೆ ನಾಮಪತ್ರ ಸಲ್ಲಿಸಲು ಬಯಸಿದ್ದೆ. ಆದರೆ, ನನಗೆ ಅವಕಾಶ ನೀಡಲಿಲ್ಲ. ಅಲ್ಲದೆ ನನ್ನ ಬೆಂಬಲಿಗರನ್ನು ಬೆದರಿಕೆ ಹಾಕಿ ಕಳಿಸಲಾಯಿತು. ಅವರೆಲ್ಲ ತಮಗೆ ತಮಗೆ ಬೇಕಾದ ಜನರಿಗೆ ಹುದ್ದೆ ನೀಡುತ್ತಿದ್ದಾರೆ. ಅದಕ್ಕಾಗಿಯೇ ನಾನು ಬಿಜೆಪಿಗೆ ರಾಜೀನಾಮೆ ನೀಡುತ್ತಿದ್ದೇನೆ. ನನ್ನನ್ನು ಬೆಂಬಲಿಸಿ ಇನ್ನೂ ಮೂವರು ಪರಿಷತ್ ಸದಸ್ಯರು ಸಹ ರಾಜೀನಾಮೆ ನೀಡಿದ್ದಾರೆ ಎಂದು ಟಿ ರಾಜಾ ಸಿಂಗ್ ಹೇಳಿದ್ದಾಗಿ ವರದಿಯಾಗಿದೆ.

Comments are closed.