Bengaluru : ಕಸದ ಲಾರಿಯಲ್ಲಿ ಮಹಿಳೆಯ ಶವ ಪತ್ತೆ ಪ್ರಕರಣಕ್ಕೆ ಬಿಗ್ ಟ್ವಿಸ್ಟ್ – ಆರೋಪಿ ಸಂಶುದ್ದೀನ್ ಅರೆಸ್ಟ್!!

Share the Article

Bengaluru : ಸಿಲಿಕಾನ್ ಸಿಟಿ ಬೆಂಗಳೂರಿನ ಚನ್ನಮ್ಮನಕೆರೆ ಅಚ್ಚುಕಟ್ಟು ಪ್ರದೇಶದಲ್ಲಿ ಬಿಬಿಎಂಪಿ ಕಸದ ಲಾರಿಯಲ್ಲಿ ಅಪರಿಚಿತ ಮಹಿಳೆಯೊಬ್ಬರ ಶವ ಒಂದು ಪತ್ತೆಯಾಗಿತ್ತು. ಇದೀಗ ಈ ಪ್ರಕರಣಕ್ಕೆ ರೋಚಕ ತಿರುವು ಸಿಕ್ಕಿದೆ. ಲಿವ್‌ ಇನ್ ರಿಲೇಷನ್‌ಶಿಪ್‌ನಲ್ಲಿ ಇದ್ದ ಅಸ್ಸಾಂ ಮೂಲದ ಅನ್ಯಕೋಮಿನ ವ್ಯಕ್ತಿ ಸಂಶುದ್ದೀನ್ ಇದೀಗ ಮಹಿಳೆ ಆಶಾಳನ್ನು ಉಸಿರುಗಟ್ಟಿಸಿ ಕೊಲೆ ಮಾಡಿದ್ದಾನೆ ಎಂಬುದು ತನಿಕೆಯಲ್ಲಿ ಬಯಲಾಗಿದೆ.

ಅಸ್ಸಾಂ ಮೂಲದ ಸಂಶುದ್ದೀನ್ (33) ಎಂಬಾತನೇ ಬಂಧಿತ ಆರೋಪಿ. ಹುಳಿಮಾವು ಬಳಿಯ ಅರ್ಬನ್ ಕಂಪನಿಯಲ್ಲಿ ಹೌಸ್ ಕೀಪಿಂಗ್ ವಸ್ತುಗಳನ್ನು ತಯಾರಿಸುವ ಕಂಪನಿಯಲ್ಲಿ ಕೆಲಸ ಮಾಡಿಕೊಂಡಿದ್ದ ಈತನಿಗೆ, ಮೃತ ಆಶಾ (40) ಎಂಬ ಬೆಂಗಳೂರು ಮೂಲದ ಮಹಿಳೆಯೊಂದಿಗೆ ಪರಿಚಯವಾಗಿತ್ತು. ಈ ಸಂಬಂಧವು ಬಳಿಕ ಲಿವ್‌ ಇನ್ ರಿಲೇಷನ್‌ಶಿಪ್‌ಗೆ ತಿರುಗಿ, ಇತ್ತೀಚೆಗೆ ಅವರು ಒಂದೇ ಮನೆಗೆ ಗಂಡ ಹೆಂಡತಿ ಎಂದು ಪರಿಚಯಿಸಿ ಬಾಡಿಗೆ ಮನೆಗೆ ಕಾಲಿಟ್ಟಿದ್ದರು. ಆದರೀಗ ಸಂಶುದ್ದೀನ್ ಇದೀಗ ಮಹಿಳೆ ಆಶಾಳನ್ನು ಉಸಿರುಗಟ್ಟಿಸಿ ಕೊಲೆ ಮಾಡಿದ್ದಾನೆ. ನಂತರ ಬಿಬಿಎಂಪಿ ಕಸದ ಲಾರಿಗೆ ಮಹಿಳೆ ಶವವನ್ನು ಮೂಟೆ ಕಟ್ಟಿ ಬೀಸಾಡಿ ಹೋಗಿದ್ದಾನೆ. ಪೊಲೀಸರು 20 ಗಂಟೆ ಅವಧಿಯಲ್ಲಿ ಆರೋಪಿಯನ್ನು ಬಂಧಿಸಿದ್ದಾರೆ.

ಮನೆಯ ಮಾಲೀಕ ಮಂಜುನಾಥ್ ಹೇಳುವ ಪ್ರಕಾರ, ಕಳೆದ ಆರು ತಿಂಗಳಿಂದ ಜಂಗಲಪಾಳ್ಯ ಮೂಲದ ಆಶಾ ಮತ್ತು ಸಂಶುದ್ದೀನ್ ಸಿ.ಕೆ. ಅಚ್ಚುಕಟ್ಟು ಪ್ರದೇಶದ ಮನೆಗೆ ಬಂದು ವಾಸ ಮಾಡುದ್ದರು. ಮುಸ್ಲಿಂ ವ್ಯಕ್ತಿಯಾದ ಸಂಶುದ್ದೀನ್ ಹಾಗೂ ಹಿಂದೂ ಆಶಾ ಆತ್ಮೀಯವಾಗಿ, ಶಾಂತಿಯಿಂದ ಬದುಕುತ್ತಿದ್ದರು. ಇದಕ್ಕೂ ಮೊದಲು ಇವರೊಬ್ಬರೂ ಕೊತ್ತನೂರು ಬಳಿ ವಾಸ ಮಾಡಿಕೊಂಡಿದ್ದರು ಎಂದು ಹೇಳಿದ್ದರು. ಮಹಿಳೆ ಖಾಸಗಿ ಮಾಲ್‌ನಲ್ಲಿ ಕೆಲಸ ಮಾಡುತ್ತಿದ್ದರೆ, ಗಂಡ ಡೆಲಿವರಿ ಬಾಯ್ ಆಗಿ ಕೆಲಸ ಮಾಡುತ್ತಿದ್ದನು. ಆದರೆ, ಇದೀಗ ಹೆಂಡತಿಯನ್ನು ಕೊಲೆ ಮಾಡಿರುವ ವಿಚಾರ ಪೊಲೀಸರು ಮನೆಗೆ ಬಂದ ನಂತರವೇ ಗೊತ್ತಾಗಿದೆ ಎಂದರು.

ಇನ್ನು ಮನೆಯಲ್ಲಿ ಚೆನ್ನಾಗಿಯೋ ಸಂಸಾರ ಮಾಡಿಕೊಂಡಿದ್ದ ದಂಪತಿ ಪೈಕಿ ಇತ್ತೀಚೆಗೆ ಆಶಾ ಕುಡಿದು ಬಂದು, ತಡರಾತ್ರಿ ಫೋನ್‌ನಲ್ಲಿ ಹೆಚ್ಚು ಮಾತುಕತೆ ಮಾಡುವುದು ಇತ್ಯಾದಿ ವಿಷಯಗಳನ್ನು ಆಧರಿಸಿ ಜಗಳಗಳು ಹೆಚ್ಚಾಗಿದ್ದವು. ಈ ಕಾರಣಕ್ಕೆ ಸಂಶುದ್ದೀನ್ ಹಾಗೂ ಆಶಾ ನಡುವೆ ತೀವ್ರ ವಾದವಿವಾದ ನಡೆದಿದ್ದು, ಅದೇ ವೇಳೆ ಉಸಿರುಗಟ್ಟಿಸಿ ಕೊಲೆ ಮಾಡಲಾಗಿದೆ. ಕೊಲೆಯ ನಂತರ, ಆಶಾರ ಮೃತದೇಹವನ್ನು ಸಂಶುದ್ದೀನ್ ತನ್ನ ಬೈಕ್‌ನಲ್ಲಿ 20 ಕಿಲೋಮೀಟರ್ ದೂರದಲ್ಲಿರುವ ಸ್ಥಳಕ್ಕೆ ಕೊಂಡೊಯ್ದು ಕಸದ ಲಾರಿಗೆ ಎಸೆದು ಪರಾರಿಯಾಗಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.

ಇದನ್ನೂ ಓದಿ;Shreeramulu : ಜನಾರ್ದನ ರೆಡ್ಡಿ ಯೊಂದಿಗಿನ ಮುನಿಸು ಮರೆತು ಹೊಂದಾಣಿಕೆ ಮಾಡಿಕೊಳ್ಳುತ್ತೇನೆ – ಶ್ರೀರಾಮುಲು ಹೇಳಿಕೆ

Comments are closed.