Shreeramulu : ಜನಾರ್ದನ ರೆಡ್ಡಿ ಯೊಂದಿಗಿನ ಮುನಿಸು ಮರೆತು ಹೊಂದಾಣಿಕೆ ಮಾಡಿಕೊಳ್ಳುತ್ತೇನೆ – ಶ್ರೀರಾಮುಲು ಹೇಳಿಕೆ

Shreeramulu: ಜನಾರ್ದನ ರೆಡ್ಡಿ ಒಂದಿಗಿನ ಮುನಿಸನ್ನು ಶಮನ ಮಾಡಿಕೊಂಡು ಮತ್ತೆ ಅವರೊಂದಿಗೆ ದೋಸ್ತಿ ಬೆಳೆಸಲು ಬಿಜೆಪಿ ನಾಯಕ ಶ್ರೀರಾಮುಲು ಅವರು ನಿರ್ಧರಿಸಿದ್ದಾರೆ. ಈ ಕುರಿತಾಗಿ ಸ್ವತಹ ಅವರೇ ಮಾಹಿತಿ ಹಂಚಿಕೊಂಡಿದ್ದಾರೆ.

ಹೌದು, ಮಾಜಿ ಸಚಿವ ಜನಾರ್ದನ ರೆಡ್ಡಿ ಮತ್ತು ನನ್ನ ನಡುವಿನ ಭಿನ್ನಾಭಿಪ್ರಾಯವನ್ನು ನಾನು ವೈಯಕ್ತಿಕವಾಗಿ ತೆಗೆದುಕೊಂಡಿಲ್ಲ. ಮುಂದೆ ನಾವಿಬ್ಬರೂ ಮತ್ತೆ ಒಂದೇ ವೇದಿಕೆಯಲ್ಲಿ ಕಾಣಿಸುತ್ತೇವೆ. ಒಂದು ಪಕ್ಷದಲ್ಲಿ ಇದ್ದೇವೆ ಅಂದಾಗ ಎಲ್ಲವೂ ಹೊಂದಾಣಿಕೆ ಮಾಡಿಕೊಂಡು ಹೋಗಬೇಕಾಗುತ್ತದೆ ಎಂದು ಮಾಜಿ ಸಚಿವ ಶ್ರೀರಾಮುಲು ಹೇಳಿದ್ದಾರೆ.
ಅಲ್ಲದೆ ನಮ್ಮಿಬ್ಬರ ನಡುವೆ ಏನೇ ಭಿನ್ನಾಭಿಪ್ರಾಯ ಇದ್ದರೂ ಅದನ್ನು ಮರೆಯುತ್ತೇನೆ. ಪಕ್ಷದ ವಿಷಯ ಬಂದಾಗ ಹೊಂದಾಣಿಕೆ ಮಾಡಿಕೊಂಡು ಹೋಗುತ್ತೇನೆ. ರಾಜ್ಯದಲ್ಲಿ ಮತ್ತೆ ಬಿಜೆಪಿ ಅಧಿಕಾರಕ್ಕೆ ತರುವುದೇ ನಮ್ಮ ಗುರಿ ಎಂದು ತಿಳಿಸಿದರು.
Comments are closed.