Home News Mangalore: ತರಗತಿ ನಡೆಯುತ್ತಿದ್ದಾಗಲೇ ಶಾಲಾ ಕಟ್ಟಡದ ಮೇಲ್ಛಾವಣಿ ಕುಸಿತ: ತಪ್ಪಿದ ಭಾರೀ ದೊಡ್ಡ ದುರಂತ

Mangalore: ತರಗತಿ ನಡೆಯುತ್ತಿದ್ದಾಗಲೇ ಶಾಲಾ ಕಟ್ಟಡದ ಮೇಲ್ಛಾವಣಿ ಕುಸಿತ: ತಪ್ಪಿದ ಭಾರೀ ದೊಡ್ಡ ದುರಂತ

Hindu neighbor gifts plot of land

Hindu neighbour gifts land to Muslim journalist

Mangalore: ತರಗತಿ ನಡೆಯುತ್ತಿದ್ದ ಸಂದರ್ಭದಲ್ಲಿ ಶಾಲಾ ಕಟ್ಟಡದ ಹಂಚಿನ ಮೇಲ್ಛಾವಣಿ ಕುಸಿದು ಬಿದ್ದ ಘಟನೆ ಮಂಗಳೂರು ಹೊರವಲಯದ ಪೇಜಾವರ ಗ್ರಾಮದಲ್ಲಿ ನಡೆದಿದೆ.

ಜೋರಾದ ಗಾಳಿಯಿಂದ ಈ ಘಟನೆ ನಡೆದಿದೆ. ಈ ಘಟನೆಯಲ್ಲಿ ಓರ್ವ ವಿದ್ಯಾರ್ಥಿ ಗಾಯಗೊಂಡಿದ್ದು, ಮಕ್ಕಳು ಶಾಲೆಯಿಂದ ಹೊರಗೆ ಓಡಿದ್ದರಿಂದ ಭಾರೀ ದೊಡ್ಡ ಅನಾಹುತ ತಪ್ಪಿದೆ.

ಜೋಕಟ್ಟೆ ಸಮೀಪದ ಪೇಜಾವರ ಮೂಲ ಮಠದ ಬಳಿಯಿರುವ ಕೆಂಜಾರು ಮುಖ್ಯಪ್ರಾಣ ಪೂರ್ವ ಪ್ರಾಥಮಿಕ ಶಾಲೆಯಲ್ಲಿ ಮಧ್ಯಾಹ್ನ 12.30 ರ ವೇಳೆ ಗಾಳಿಗೆ ಒಂದು ಬದಿಯ ಹಂಚು ಜಾರುತ್ತಿರುವುದನ್ನು ಮಕ್ಕಳು ಕಂಡಿದ್ದು ಹೊರಗೆ ಓಡಿ ಹೋಗಿದ್ದಾರೆ. ಸ್ವಲ್ಪ ಹೊತ್ತಿನಲ್ಲಿ ತರಗತಿ ಕೊಠಡಿಯ ಹಂಚು ಪೂರ್ತಿಯಾಗಿ ಕುಸಿದು ಬಿದ್ದಿದೆ.

ಶೋನಿತ್‌ ಎನ್ನುವ ಯುಕೆಜಿ ವಿದ್ಯಾರ್ಥಿಗೆ ತಲೆ ಮತ್ತು ಮುಖಕ್ಕೆ ಗಾಯವಾಗಿದ್ದು, ಮಂಗಳೂರಿನ ಖಾಸಗಿ ಆಸ್ಪತ್ರೆಗೆ ದಾಖಲು ಮಾಡಲಾಗಿದೆ. ಶಾಲೆಯ ದುರಸ್ತಿ ಕಾರ್ಯ ಇತ್ತೀಚೆಗೆ ನಡೆದಿದ್ದು, ಶಾಲೆಯಲ್ಲಿ ಒಟ್ಟು 21 ವಿದ್ಯಾರ್ಥಿಗಳಿದ್ದರು ಎಂದು ವರದಿಯಾಗಿದೆ.

ಇದನ್ನೂ ಓದಿ:Puttur: ಪುತ್ತೂರು: ಪ್ರೀತಿ ನೆಪದಲ್ಲಿ ದೈಹಿಕ ಸಂಪರ್ಕ: ಪತ್ರಿಕಾಗೋಷ್ಠಿಯಲ್ಲಿ ನಮಗೆ ನ್ಯಾಯ ದೊರಕಿಸಿ ಕೊಡಿ ಎಂದ ಸಂತ್ರಸ್ತೆಯ ತಾಯಿಯಿಂದ ಮನವಿ!