Bengaluru : ನಾನು, ಶಿವಕುಮಾರ್ ಚೆನ್ನಾಗೆ ಇದ್ದೇವೆ, ನಾವಿಬ್ರು ಒಂದೇ- ಡಿಕೆಶಿಯ ಕೈ ಎತ್ತಿ ಹೇಳಿದ ಸಿಎಂ ಸಿದ್ದರಾಮಯ್ಯ

Bengaluru : ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಡಿಸಿಎಂ ಡಿಕೆ ಶಿವಕುಮಾರ್ ನಡುವೆ ಅಷ್ಟಾಗಿ ಸರಿ ಇಲ್ಲ, ಎಲ್ಲವೂ ತೋರಿಕೆದ ಮಾತ್ರ ಎಂಬ ವಿಚಾರ ರಾಜ್ಯಾದ್ಯಂತ ಕೇಳಿ ಬರುತ್ತಿತ್ತು. ಇದರ ಬೆನ್ನಲ್ಲೇ ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಡಿಕೆ ಶಿವಕುಮಾರ್ ಒಗ್ಗಟ್ಟು ಪ್ರದರ್ಶನ ಮಾಡಿದ್ದು ನಮ್ಮ ಸರ್ಕಾರ ಬಂಡೆ ರೀತಿಯಲ್ಲಿ ಭದ್ರವಾಗಿರುತ್ತದೆ ಎಂದು ಹೇಳಿಕೆ ನೀಡಿದ್ದಾರೆ.

ಹೌದು, ಸುದ್ದಿಗಾರರ ಜೊತೆ ಮಾತನಾಡಿದ ಸಿದ್ದರಾಮಯ್ಯ ‘ ನಾವಿಬ್ಬರು (ಡಿಸಿಎಂ ಡಿಕೆ -ಸಿದ್ದರಾಮಯ್ಯ) ಚೆನ್ನಾಗಿಯೇ ಇದ್ದೇವೆ. ಯಾರು ಹೇಳಿದ್ರೂ ನಾವು ಕೇಳಲ್ಲ. ಈ ಸರ್ಕಾರ ಕಲ್ಲು ಬಂಡೆ ಹಾಗೆ ಸುಭದ್ರವಾಗಿರಲಿದೆ ಎಂದು ಹೇಳಿದ್ದಾರೆ. ಸುರ್ಜೆವಾಲಾ ಬೆಂಗಳೂರಿಗೆ ಬರ್ತಾರೆ, ಬಂದು ಎಲ್ಲರ ಅಹವಾಲು ಕೇಳುತ್ತಾರೆ ಎಂದು ಹೇಳಿದರು.
ಇನ್ನು ವಿಪಕ್ಷ ನಾಯಕ ಆರ್ ಅಶೋಕ್ ದಸರಾ ವೇಳೆಗೆ ಸಿಎಂ ಬದಲಾವಣೆ ಎಂದು ಹೇಳಿಕೆ ಕುರಿತು ಸಿಎಂ ಸಿದ್ದರಾಮಯ್ಯ ಪ್ರತಿಕ್ರಿಯೆ ನೀಡಿ, ಬಿಜೆಪಿ ಅವರು ಯಾವಾಗಲೂ ಸುಳ್ಳು ಹೇಳುವುದರಲ್ಲಿ ನಿಸ್ಸಿಮರು. ಈ ಬಾರಿ ನಾನೇ ದಸರಾ ಉದ್ಘಾಟಿಸುತ್ತೇನೆ ಎಂದು ನಿಮಗೆ ಅನಿಸಿದೆ ಅಲ್ವಾ? ಅದೇ ಸತ್ಯ ಎಂದರು.
Comments are closed.