Rinku Singh: 9ನೇ ಕ್ಲಾಸ್‌ ಫೇಲ್‌ ರಿಂಕುಸಿಂಗ್‌ಗೆ ಶಿಕ್ಷಣಾಧಿಕಾರಿ ಹುದ್ದೆ: ಭಾರೀ ಚರ್ಚೆ

Share the Article

Rinku Singh: ಕ್ರಿಕೆಟಿಗ ರಿಂಕು ಸಿಂಗ್‌ ಉತ್ತರ ಪ್ರದೇಶದ ಜಿಲ್ಲಾ ಬೇಸಿಕ್‌ ಶಿಕ್ಷಣಾಧಿಕಾರಿ ಆಗಲಿದ್ದಾರೆ. ರಿಂಕು ಸಿಂಗ್‌ ವಿದ್ಯಾರ್ಹತೆ 8 ನೇ ತರಗತಿ. ಕುಟುಂಬದ ಆರ್ಥಿಕ ಪರಿಸ್ಥಿತಿ ಚೆನ್ನಾಗಿರದ ಕಾರಣ 9 ನೇ ತರಗತಿಯಲ್ಲಿ ಫೇಲ್‌ ಆಗಿ ಸ್ಕೂಲ್‌ ಮುಂದುವರಿಸಲಾಗಲಿಲ್ಲ. ಹೀಗಾಗಿ ಕ್ರಿಕೆಟ್‌ ಆಸಕ್ತಿನಿಂದ ಪ್ರೊಫೆಷನ್‌ ಆಗಿ ಬದಲಾವಣೆ ಆಯಿತು.

ಬಿಎಸ್‌ಎ ಹುದ್ದೆಗೆ ನೇಮಕ ಆದ ರಿಂಕು ಸಿಂಗ್‌ಗೆ 8ನೇ ತರಗತಿ ಪಾಸ್‌ ಆದವರು ಶಿಕ್ಷಣ ಸುಧಾರಣೆಯ ಜವಾಬ್ದಾರಿ ಹೊರಬಲ್ಲರಾ? ಎನ್ನುವ ಚರ್ಚೆ ಶುರುವಾಗಿದೆ. ಅಂತರಾಷ್ಟ್ರೀಯ ಮಟ್ಟದಲ್ಲಿ ಭಾರತಕ್ಕೆ ಪದಕ ಗೆದ್ದ ಕ್ರೀಡಾಪಟುಗಳಿಗೆ ಆಡಳಿತ ಹುದ್ದೆಗಳಲ್ಲಿ ನೇರ ನೇಮಕಾತಿ ನೀಡಬಹುದು. ರಿಂಕು ಸಿಂಗ್‌ ಅವರಿಗೆ ಕೂಡಾ ಈ ನಿಯಮದಡಿಯಲ್ಲಿ ನೇಮಕ ಮಾಡಲಾಗುತ್ತಿದೆ.

ರಿಂಕು ಸಿಂಗ್‌ ಅವರನ್ನು ಬಿಎಸ್‌ಎ ಆಗಿ ನೇಮಕ ಮಾಡುವುದಕ್ಕೆ ಭಾರೀ ವಿರೋಧ ವ್ಯಕ್ತವಾಗಿದೆ. ಕಡಿಮೆ ವಿದ್ಯಾಭ್ಯಾಸ ಇರುವ ರಿಂಕು ಈ ಹುದ್ದೆಗೆ ಸೂಕ್ತ ಅಭ್ಯರ್ಥಿಯಾ ಎನ್ನುವ ಪ್ರಶ್ನೆ ಮೂಡಿದೆ.

Comments are closed.