BJP: ವಿ ಸೋಮಣ್ಣನಿಗೆ ಬಿಜೆಪಿ ರಾಜ್ಯಾಧ್ಯಕ್ಷನಾದ್ರೆ ಪೆಟ್ರೋಲ್ ಸುರಿದುಕೊಂಡು ಬೆಂಕಿ ಹಚ್ಚಿಕೊಳ್ಳುತ್ತೇನೆ – ಬಿಜೆಪಿ ಮುಖಂಡನಿಂದ ಬೆದರಿಕೆ

Share the Article

BJP: ಕರ್ನಾಟಕ ಬಿಜೆಪಿಯಲ್ಲಿ ಸದ್ಯ ರಾಜ್ಯಾಧ್ಯಕ್ಷರ ಸ್ಥಾನದ ಬದಲಾವಣೆ ವಿಚಾರ ಭಾರಿ ಚರ್ಚೆಯಾಗುತ್ತಿದೆ. ಹಾಲಿ ಅಧ್ಯಕ್ಷ ಬಿ ವೈ ವಿಜಯೇಂದ್ರ ಅವರ ವಿರುದ್ಧ ಅನೇಕ ನಾಯಕರು ರೆಬೆಲ್ ಆದ ಕಾರಣ ಹೊಸ ಅಧ್ಯಕ್ಷರ ಆಯ್ಕೆಗೆ ಹೈಕಮಾಂಡ್ ತೀರ್ಮಾನಿಸಿದೆ ಎನ್ನಲಾಗುತ್ತಿದೆ. ಈ ನಡುವೆ ಅನೇಕ ಬಿಜೆಪಿ ಮುಖಂಡರು ರಾಜ್ಯ ಅಧ್ಯಕ್ಷ ಸ್ಥಾನದ ಮೇಲೆ ಕಣ್ಣಿಟ್ಟಿದ್ದಾರೆ. ಅದರಲ್ಲೂ ಕೇಂದ್ರ ಸಚಿವ ಹಾಗೂ ತುಮಕೂರು ಲೋಕಸಭಾ ಕ್ಷೇತ್ರದ ಸಂಸದ ಬಿ ಸೋಮಣ್ಣ ಕೂಡ ಬಿಜೆಪಿ ರಾಜ್ಯಾಧ್ಯಕ್ಷ ಸ್ಥಾನದ ಮೇಲೆ ಓರೆಗಣ್ಣಿನ ನೋಟ ಬೀರಿದ್ದಾರೆ.

ಈ ನಡುವೆ ಬಿಜೆಪಿ ಮುಖಂಡರಾದ ತೋಟದಪ್ಪ ಬಸವರಾಜ್ ಅವರು ವಿ. ಸೋಮಣ್ಣರಿಗೆ ಬಿಜೆಪಿ ರಾಜ್ಯಾಧ್ಯಕ್ಷ ಸ್ಥಾನ ನೀಡಿದರೆ ಪೆಟ್ರೋಲ್ ಸುರಿದುಕೊಂಡು ಆತ್ಮಹತ್ಯೆ ಮಾಡಿಕೊಳ್ಳುತ್ತೇನೆ ಇಂದು ಬೆದರಿಕೆ ಒಡ್ಡಿದ್ದಾರೆ. ಅಧಿಕಾರಕ್ಕಾಗಿ ಹೊರಗಿನಿಂದ ಬಂದವರನ್ನು ರಾಜ್ಯಾಧ್ಯಕ್ಷರನ್ನಾಗಿ ಮಾಡಿದರೆ ಬಿಜೆಪಿಗಾಗಿ ದುಡಿದ ಕಾರ್ಯಕರ್ತರಿಗೆ ಅಪಮಾನ ಮಾಡಿದಂತಾಗುತ್ತದೆ ಎಂಬುದು ಅವರ ಆಪಾದನೆಯಾಗಿದೆ.

ಅಲ್ಲದೆ ಸೋಮಣ್ಣ ಅವರು ವರುಣಾದಲ್ಲಿ ಸೋತ ನಂತರ ಕಾರ್ಯಕರ್ತರನ್ನು ನಿಂದಿಸಿದ್ದಾರೆ. ಒಂದು ಮತಕ್ಕೆ 2000 ರೂ. ನೀಡಿ ಮತದಾರರನ್ನು ಭ್ರಷ್ಟಾಚಾರಿಗಳಾಗಿ ಮಾಡಿದ್ದಾರೆ. ಸೋಮಣ್ಣ ತಮ್ಮ ಸ್ವಯಂಕೃತ ಅಪರಾಧದಿಂದ ಸೋಲನ್ನು ಅನುಭವಿಸಿದರು. ವಿಜಯೇಂದ್ರ ಬಗ್ಗೆ ಹಗುರವಾಗಿ ಮಾತನಾಡಿದ್ದು ಅವರ ಸೋಲಿಗೆ ಕಾರಣವಾಯಿತು. ಒಮ್ಮೆ ಅಧ್ಯಕ್ಷರಾದವರು ಮೂರು ವರ್ಷಗಳವರೆಗೆ ಇರುತ್ತಾರೆ. ರಾಜ್ಯ ಬಿಜೆಪಿ ಅಧ್ಯಕ್ಷರಾಗಿ ವಿಜಯೇಂದ್ರ ಅವಧಿ ಇನ್ನು ಮುಗಿದಿಲ್ಲ. ಅವಧಿಗೂ ಮುನ್ನ ವಿಜಯೇಂದ್ರ ಬದಲಾವಣೆ ಸಾಧ್ಯವಿಲ್ಲ. ಬದಲಾವಣೆ ಮಾಡಿದರೆ ಶ್ರೀರಾಮಲು ಅಥವಾ ತೇಜಸ್ವಿನಿ ರಾಜ್ಯಾಧ್ಯಕ್ಷರಾಗಲಿ ಎಂದು ಅವರು ಹೇಳಿದ್ದಾರೆ.

ಇದನ್ನೂ ಓದಿ:Hassan : ಹಾಸನದಲ್ಲಿ ಇಂದು ಹೃದಯಘಾತಕ್ಕೆ 3 ಬಲಿ – ತಿಂಗಳಲ್ಲಿ 21 ಜನ ಸಾವು

Comments are closed.