Mangaluru: ಮಹಿಳೆ ಹಣೇಲಿ ಬಿಂದಿ ಇರದ ಜಾಹೀರಾತು: ಕರ್ನಾಟಕ ಬ್ಯಾಂಖ್‌ ಸಿಇಒ ತಲೆದಂಡ!

Share the Article

Mangaluru: ಕರ್ನಾಟಕ ಬ್ಯಾಂಕ್‌ನ ವ್ಯವಸ್ಥಾಪಕ ನಿರ್ದೇಶಕ (ಎಂಡಿ) ಸಿಇಓ ಆಗಿರುವ ಶ್ರೀಕೃಷ್ಣನ್‌ ಹರಿಹರ ಶರ್ಮಾ ಅವರು ರಾಜೀನಾಮೆ ಹಾಗೂ ಬ್ಯಾಂಕಿನ ಕಾರ್ಯನಿರ್ವಾಹಕ ನಿರ್ದೇಶಕ (ಇಡಿ) ಶೇಖರ್‌ ರಾವ್‌ ನೀಡಿದ ರಾಜೀನಾಮೆಯನ್ನು ಬ್ಯಾಂಕ್‌ನ ನಿರ್ದೇಶಕ ಮಂಡಳಿ ಭಾನುವಾರ ಅಂಗೀಕಾರ ಮಾಡಿದೆ.

2023 ರ ಜೂನ್‌ನಲ್ಲಿ ಶ್ರೀಕೃಷ್ಣನ್‌ ಅವರು ಕರ್ನಾಟಕ ಬ್ಯಾಂಕ್‌ ಎಂಡಿ ಹಾಗೂ ಸಿಇಒ ಆಗಿ ನೇಮಕಗೊಂಡಿದ್ದರು. ಬ್ಯಾಂಕ್‌ನ ಹಿತಾಸಕ್ತಿಗೆ ವಿರುದ್ಧವಾಗಿ ವರ್ತನೆ ಕಂಡುಬಂದ ಕಾರಣ ಜೂ.14 ರಂದು ನಡೆದ ಬ್ಯಾಂಕ್‌ನ ನಿರ್ದೇಶಕ ಮಂಡಳಿಯ ಸಭೆಯಲ್ಲಿ ಎಂಡಿ ಶ್ರೀಕೃಷ್ಣನ್‌ ರಾಜೀನಾಮೆಗೆ ಸೂಚಿಸಿತ್ತು. ಹೀಗಾಗಿ ಶುಕ್ರವಾರ ಎಂಡಿ ಹಾಗೂ ಸಿಇಒ ಸ್ಥಾನಕ್ಕೆ ರಾಜೀನಾಮೆ ನೀಡಿದ್ದರು.

ಕರ್ನಾಟಕ ಬ್ಯಾಂಕ್‌ನ ಶತಮಾನೋತ್ಸವ ಕಾರ್ಯಕ್ರಮ ಮಂಗಳೂರಿನಲ್ಲಿ ನಡೆದಾಗ ಶ್ರೀಕೃಷ್ಣನ್‌ ಅವರ ಅನುಮೋದನೆಯಲ್ಲಿ ಜಾಹೀರಾತು ಪ್ರಕಟಗೊಂಡಿತ್ತು. ಅದರಲ್ಲಿ ಭಾರತೀಯ ಸಂಸ್ಕೃತಿಯ ಪ್ರತೀಕವಾಗಿ ಮಹಿಳೆಯ ಹಣೆಯಲ್ಲಿ ಬಿಂದಿ ಧರಿಸದ ಜಾಹೀರಾತು ನೀಡಲಾಗಿತ್ತು. ಇದು ಬ್ಯಾಂಕ್‌ನ ಗ್ರಾಹಕರ ವ್ಯಾಪಕ ಆಕ್ರೋಶಕ್ಕೆ ಕಾರಣವಾಗಿತ್ತು.

ಕರ್ನಾಟಕ ಬ್ಯಾಂಕಿನ ಪ್ರಧಾನ ಕಚೇರಿ ಮಂಗಳೂರಿನಲ್ಲಿ ಇದೆ. ನಿರ್ದೇಶಕ ಮಂಡಳಿ ಸೇರಿದಂತೆ ಎಲ್ಲಾ ಸಭೆ ಮಂಗಳೂರಿನ ಕಚೇರಿಯಲ್ಲಿ ನಡೆಯುತ್ತದೆ. ಆದರೆ ಎಂಡಿ, ಸಿಇಒ ಆಗಿ ಶ್ರೀಕೃಷ್ಣನ್‌ ಅವರು ಬೆಂಗಳೂರಿನಲ್ಲಿ ಎಲ್ಲಾ ಸಭೆ ನಡೆಯುವಂತೆ ನೋಡಿಕೊಳ್ಳುತ್ತಿದ್ದರು. ಹಾಗೂ ಬೆಂಗಳೂರಿನಲ್ಲಿಯೇ ಕಾರ್ಯನಿರ್ವಹಿಸುತ್ತಿದ್ದರು. ಅಲ್ಲದೇ ಮಂಗಳೂರಿನ ಪ್ರಧಾನ ಕಚೇರಿಯನ್ನು ಬೆಂಗಳೂರಿಗೆ ಸ್ಥಳಾಂತರಿಸಲು ಭಾರೀ ಪ್ರಯತ್ನ ನಡೆಸಿದ್ದರು. ಇದರ ವಿರುದ್ಧ ಬ್ಯಾಂಕಿನ ಗ್ರಾಹಕರಿಂದಲೇ ಆಕ್ಷೇಪ ಕೇಳಿ ಬಂದ ಕಾರಣ ನಿರ್ದೇಶಕ ಮಂಡಳಿ ಆ ಕೆಲಸ ಕೈ ಬಿಟ್ಟಿತ್ತು.

Comments are closed.