Puttur: ಪುತ್ತೂರು ಸರಕಾರಿ ಆಸ್ಪತ್ರೆ : ನಾಲ್ವರು ವೈದ್ಯರು ವರ್ಗಾವಣೆ!

Puttur: ಪುತ್ತೂರು (Puttur) ಸರಕಾರಿ ಆಸ್ಪತ್ರೆಯ ಆಡಳಿತ ವೈದ್ಯಾಧಿಕಾರಿ ಡಾ. ಆಶಾಜ್ಯೋತಿ ಪುತ್ತೂರಾಯ ಅವರು ಮಡಿಕೇರಿ ಜಿಲ್ಲಾ ಆಸ್ಪತ್ರೆಗೆ, ಅರಿವಳಿಕೆ ತಜ್ಞೆ ಡಾ. ಜಯಕುಮಾರಿ ಅವರು ತುಮಕೂರು ಜಿಲ್ಲಾ ಆಸ್ಪತ್ರೆಗೆ, ದಂತ ತಜ್ಞ ಡಾ. ಜೈದೀಪ್ ಅವರು ಸಕಲೇಶಪುರ ತಾಲೂಕು ಆಸ್ಪತ್ರೆಗೆ, ಅರಿವಳಿಕೆ ತಜ್ಞೆ ಡಾ. ಶ್ವೇತಾ ಸುಳ್ಯ ಸರಕಾರಿ ಆಸ್ಪತ್ರೆಗೆ ವರ್ಗಾವಣೆಗೊಳ್ಳಲಿದ್ದಾರೆ.

ಇತ್ತೀಚೆಗಷ್ಟೆ ವೈದ್ಯರುಗಳ ವರ್ಗಾವಣೆ ಕುರಿತು ಕೌನ್ಸಿಲ್ ನಡೆದಿದ್ದು, ಅದರಲ್ಲಿ ವೈದ್ಯರ ಆಯ್ಕೆಗೆ ಸಂಬಂಧಿಸಿ ವರ್ಗಾವಣೆಗೊಳ್ಳಲಿದ್ದಾರೆ ಎಂದು ತಿಳಿದು ಬಂದಿದೆ. ವರ್ಗಾವಣೆ ಕುರಿತು ಇನ್ನಷ್ಟೆ ಅಧೀಕೃತ ಆದೇಶ ಬರಬೇಕಾಗಿದೆ.
Comments are closed.