ನೆನೆಸಿಟ್ಟ ಭತ್ತವನ್ನು ಲೂಟಿ ಮಾಡಿ ಅಪಾರ ನಷ್ಟ – ಕೊಡಗಿನಲ್ಲಿ ನಿಲ್ಲದ ಆನೆ ಮಾನವ ಸಂಘರ್ಷ

ಮಡಿಕೇರಿ: ಕೊಡಗು ಜಿಲ್ಲೆಯಲ್ಲಿ ಆನೆ ಮತ್ತು ಆನೆ ಸಂಘರ್ಷ ಇನ್ನೊಂದು ಹಂತಕ್ಕೆ ತಲುಪಿದೆ. ಆನೆಗಳು, ರೈತರು ನೆನೆಸಿಟ್ಟ ಭತ್ತವನ್ನು ಲೂಟಿ ಮಾಡಿ ಅಪಾರ ನಷ್ಟ ಉಂಟು ಮಾಡಿವೆ.

ಆನೆಗಳು ಗದ್ದೆಗೆ ದಾಳಿ ಮಾಡಿ ಬಾಳೆ ಕಂಗು ಮತ್ತಿತರ ತೋಟಗಾರಿಕಾ ಬೆಳೆಗಳನ್ನು ಮಾಡುವುದನ್ನು ದಿನನಿತ್ಯ ಕೇಳುತ್ತಲೇ ಇದ್ದೇವೆ. ಆನೆ ಮತ್ತು ಮನುಷ್ಯನ ಸಂಘರ್ಷ ಜಾಸ್ತಿ ಆಗುತ್ತಿರುವ ಈ ಸಂದರ್ಭದಲ್ಲಿ ಇದೀಗ ಆನೆಗಳು ಮತ್ತೊಂದು ಹೆಜ್ಜೆ ಮುಂದೆ ಮುಂದಿಟ್ಟಿದೆ. ರೈತರು ಗದ್ದೆಗೆ ಬಿತ್ತನೆ ಮಾಡಲು ಬೀಜ ಹಾಕಲು ನೆನೆಸಿಟ್ಟ ಭತ್ತವನ್ನು ಕಾಡಾನೆಗಳು ಬಂದು ಎಲ್ಲಾ ಲೂಟಿ ಮಾಡಿ ಹೋಗಿರುವ ಘಟನೆ ಹೊಸೂರು ಗ್ರಾಮ ಪಂಚಾಯಿತಿಯ ಕಳತ್ಮಾಡು ಗ್ರಾಮದಲ್ಲಿ ನಡೆದಿದೆ.
ರೈತರೊಬ್ಬರು ಬಿತ್ತನೆ ಮಾಡಲು ಭತ್ತವನ್ನು ನೆನೆ ಹಾಕಿ ಇಟ್ಟಿದ್ದರು. ಕಾಡಾನೆಗಳು ಬಿತ್ತನೆ ಮಾಡಲು ನೆನೆಸಿ ಇಟ್ಟಿದ್ದ ಭತ್ತವನ್ನು ಗುಳುಂ ಮಾಡಿ ಹಾಕಿವೆ. ಆನೆ ಹಾವಳಿ ರೈತನ ಗೋಳು ಹೇಳತೀರದಾಗಿದ್ದು, ಅಪಾರ ನಷ್ಟ ಸಂಭವಿಸಿದೆ ಎಂದು ರೈತರು ದೂರಿದ್ದಾರೆ.
Comments are closed.