Peenya Dasaralli: ಚಲಿಸುತ್ತಿರುವ ಕಾರಿಗೆ ಅಪ್ಪಳಿಸಿದ ಫ್ಲೆಕ್ಸ್: ದಂಪತಿ ಸಹಿತ ಮಗು ಅಪಾಯದಿಂದ ಜಸ್ಟ್ ಮಿಸ್

Peenya Dasaralli: ರಸ್ತೆ ಬದಿಯಲ್ಲಿ ಹಾಕಲಾಗಿದ್ದ ಜಾಹೀರಾತು ಫ್ಲೆಕ್ಸ್‌ವೊಂದು ಹಾರಿಬಂದು ಚಲಿಸುತ್ತಿದ್ದ ಕಾರಿಗೆ ಬಡಿದ ಪರಿಣಾಮ ಕಾರಿನ ಮುಂಭಾಗದ ಗ್ಲಾಸ್ ಪುಡಿ ಪುಡಿಯಾಗಿರುವ ಘಟನೆ ಬೆಂಗಳೂರು ಹೊರವಲಯದ ತುಮಕೂರು ರಸ್ತೆಯ 8ನೇ ಮೈಲಿ ಬಳಿ ನಡೆದಿದೆ.

ನೆಲಮಂಗಲ ಮೂಲದ ದಂಪತಿ ತಮ್ಮ ಮಗು ಸಹಿತ ಕಾರಿನಲ್ಲಿ 8ನೇ ಮೈಲಿ ಫ್ಲೈ ಓವರ್ ಮೇಲೆ ನೆಲಮಂಗಲ ಕಡೆ ಬರುತ್ತಿದ್ದಾಗ ಫ್ಲೈಓವರ್ ಮೇಲೆ ಕಟ್ಟಲಾಗಿದ್ದ ಜಾಹೀರಾತು ಫ್ಲೆಕ್ಸ್ ತೆರವು ಮಾಡಲಾಗುತ್ತಿತ್ತು. ಸಿಬ್ಬಂದಿ ಮುಂಜಾಗ್ರತೆ ವಹಿಸದೆ ಏಕಾಏಕಿ ಎಳೆದ ಪರಿಣಾಮ ಫ್ಲೆಕ್ಸ್ ಕಾರಿಗೆ ಬಂದು ಅಪ್ಪಳಿಸಿದೆ. ಅದೃಷ್ಟವಶಾತ್ ದಂಪತಿ ಹಾಗೂ ಮಗು ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಕಾರಿನ ಮುಂಭಾಗ ಹಾನಿಗೊಳಗಾಗಿದೆ.
ಸಾಮಾಜಿಕ ಜಾಲತಾಣದಲ್ಲಿ ಈ ಕುರಿತ ವೀಡಿಯೋ ವೈರಲ್ ಆಗಿದೆ. ಈ ಕುರಿತ ದಂಪತಿ ನೆಲಮಂಗಲ ನವಯುಗ ಬಳಿಯ ಟೋಲ್ ಕಂಪನಿ ಕಚೇರಿಗೆ ಹೋದಾಗ ಕಚೇರಿ ಸಿಬ್ಬಂದಿ ಉಡಾಫೆ ಉತ್ತರ ನೀಡಿದ್ದು ಮಾತ್ರವಲ್ಲದೇ ದಂಪತಿಗೆ ಧಮ್ಕಿ ಹಾಕಿದ್ದಾರೆ ಈ ಕುರಿತು ಸ್ಥಳೀಯರು ಟೋಲ್ ಸಿಬ್ಬಂದಿ ವಿರುದ್ಧ ಆಕ್ರೋಶಗೊಂಡಿದ್ದಾರೆ.
ನೆಲಮಂಗಲ ಟೌನ್ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿದ್ದಾರೆ.
Comments are closed.