Air India: ಏರ್‌ಇಂಡಿಯಾ ವಿಮಾನದಲ್ಲಿ ಕುಡುಕ ಪ್ರಯಾಣಿಕನಿಂದ ಗಗನಸಖಿ ಜೊತೆ ಅಸಭ್ಯ ವರ್ತನೆ

Share the Article

Air India: ದುಬೈನಿಂದ ಭಾರತದ ಜೈಪುರಕ್ಕೆ ಬರುತ್ತಿದ್ದ ಏರ್‌ಇಂಡಿಯಾ ವಿಮಾನದಲ್ಲಿ ಪ್ರಯಾಣಿಕನೊಬ್ಬ ಕುಡಿದ ಮತ್ತಿನಲ್ಲಿ ಮಹಿಳಾ ಕ್ಯಾಬಿನ್‌ ಸಿಬ್ಬಂದಿ ಜೊತೆ ಅಸಭ್ಯವಾಗಿ ವರ್ತಿಸಿದ ಘಟನೆ ನಡೆದಿದೆ.

ದುಬೈ-ಜೈಪುರ ಏರ್‌ ಇಂಡಿಯಾ ಎಕ್ಸ್‌ಪ್ರೆಸ್‌ ಫ್ಲೈಟ್‌ನಲ್ಲಿ ಈ ಘಟನೆ ನಡೆದಿದೆ. ಮದ್ಯ ಕುಡಿದ ನಂತರ ಅಸಭ್ಯ ವರ್ತನೆ ತೋರಿರುವುದಾಗಿ ಏರ್‌ ಇಂಡಿಯಾ ಈ ಕುರಿತು ದೂರು ದಾಖಲು ಮಾಡಿದೆ.

ರಾಜಸ್ಥಾನದ ಜೈಪುರ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ವಿಮಾನ ಲ್ಯಾಂಡ್‌ ಆದ ನಂತರ ಏರ್‌ಇಂಡಿಯಾ ಎಕ್ಸ್‌ಪ್ರೆಸ್‌ ಈ ಕುರಿತು ಏರ್‌ಪೋರ್ಟ್‌ ಪ್ರಾಧಿಕಾರಕ್ಕೆ ವರದಿ ಮಾಡಿದೆ. ಕ್ಯಾಬಿನ್‌ ಸಿಬ್ಬಂದಿ ನೀಡಿದ ದೂರಿನ ಕುರಿತು ವ್ಯಕ್ತಿ ವಿರುದ್ಧ ಏರ್‌ಲೈನ್ಸ್‌ ಪ್ರಕರಣ ದಾಖಲು ಮಾಡಿದೆ.

Comments are closed.