Davangere : ಅಳಿಯನ ಜೊತೆ ಅತ್ತೆ ಎಸ್ಕೇಪ್ ಪ್ರಕರಣ – ಸ್ಟೋರಿಯಲ್ಲಿ ಈಗ ದಿಡೀರ್ ಟ್ವಿಸ್ಟ್!!

Share the Article

Davangere : ಕೆಲವು ದಿನಗಳ ಹಿಂದೆ ಜಿಲ್ಲೆಯ ಚನ್ನಗಿರಿ ತಾಲೂಕಿನ ಮುದ್ದೇನಹಳ್ಳಿ ಗ್ರಾಮದಲ್ಲೊಂದು ವಿಚಿತ್ರ ಲವ್ವಿ ಡವ್ವಿ ಪ್ರಕರಣ ಬೆಳಕಿಗೆ ಬಂದಿದ್ದು, ವಿವಾಹವಾದ ಎರಡೇ ತಿಂಗಳಿಗೆ 25 ವರ್ಷದ ಅಳಿಯನ ಜತೆ 55ರ ಅತ್ತೆ ಪರಾರಿಯಾಗಿದ್ದಳು. ಇದೀಗ ಈ ಪ್ರಕರಣಕ್ಕೆ ಮತ್ತೆ ಟ್ವಿಸ್ಟ್ ಒಂದು ಸಿಕ್ಕಿದೆ.

ದಾವಣಗೆರೆಯ ಮುದ್ದೇನಹಳ್ಳಿಯ ನಾಗರಾಜ್‌ ಎಂಬಾತನಿಗೆ ಶಾಂತ ಎರಡನೇ ಪತ್ನಿ. ಮೊದಲ ಪತ್ನಿಯಿಂದ ವಿಚ್ಛೇದನ ಪಡೆದಿದ್ದ ನಾಗರಾಜ್‌ ಶಾಂತಾ ಎಂಬಾಕೆಯನ್ನು ವಿವಾಹವಾಗಿದ್ದ. ನಾಗರಾಜ್‌ಗೆ ಮೊದಲ ಪತ್ನಿಯಿದ ಇಬ್ಬರು ಹೆಣ್ಣುಮಕ್ಕಳು ಸಹ ಇದ್ದವು. ಎರಡು ವರ್ಷಗಳ ಹಿಂದೆ ಶಾಂತಾಗೆ ಮರವಂಜಿ ಗ್ರಾಮದ ಗಣೇಶ್‌ ಎಂಬಾತನ ಪರಿಚಯವಾಗುತ್ತೆ. ಒಮ್ಮೆ ಗಣೇಶನನ್ನು ಮನೆಗೆ ಕರೆತಂದ ಶಾಂತಾ ಒಳ್ಳೆಯ ಹುಡುಗ, ಆತನಿಗೆ ತಮ್ಮ ದೊಡ್ಡ ಮಗಳನ್ನು ಕೊಟ್ಟು ಮದುವೆ ಮಾಡೋಣ, ತಮಗೂ ಗಂಡು ಮಕ್ಕಳಿಲ್ಲ, ಇಳಿ ವಯಸ್ಸಿನಲ್ಲಿ ಆಸರೆಯಾಗುತ್ತಾನೆ ಎಂದು ಪತಿಯನ್ನು ಒಪ್ಪಿಸಿದ್ದಳು.

ನಾಗರಾಜ್‌ ಅದ್ದೂರಿಯಾಗಿ ಮದುವೆ ಮಾಡಿಕೊಟ್ಟಿದ್ದರು. ಅತ್ತ ಮರವಂಜಿಯ ಪತಿ ಮನೆಗೆ ಹೋದ ಮೊದಲ ಮಗಳಿಗೆ ಪತಿ ಗಣೇಶ ಹಿಂಸೆ ನೀಡಲಾರಂಭಿಸಿದ. ಅಷ್ಟರಲ್ಲೇ ಪತಿಯ ಮೊಬೈಲ್‌ ಚೆಕ್‌ ಮಾಡಿದ ಆಕೆಗೆ ಪತಿ ಹಾಗೂ ಮಲತಾಯಿಯ ಅಕ್ರಮ ಸಂಬಂಧ ಗೊತ್ತಾಗಿತ್ತು. ಮೊಬೈಲ್ ನಲ್ಲಿ ಅಶ್ಲೀಲ ಮೆಸ್ಸೇಜ್, ಸರಸವನ್ನು ನೋಡಿದ ಹೇಮಾ ಅದನ್ನು ತನ್ನ ತಂದೆ ನಾಗರಾಜ್ ಗೆ ಕಳುಹಿಸುತ್ತಾಳೆ. ಈ ವಿಚಾರ ಗೊತ್ತಾಗುತ್ತಿದ್ದಂತೆ ಗಣೇಶ್ ಹಾಗೂ ಅತ್ತೆ ಶಾಂತಾ ಹಣ, ಆಭರಣ ಕದ್ದು ಎಸ್ಕೇಪ್ ಆಗಿದ್ದರು. ಈ ಬಗ್ಗೆ ಚನ್ನಗಿರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಇದೀಗ ಈ ಪ್ರಕರಣಕ್ಕೆ ಬಿಗ್ ಟ್ವಿಸ್ಟ್ ಸಿಕ್ಕಿದೆ

ಹೌದು, ಅಳಿಯನ ಜೊತೆಗೆ ಅತ್ತೆ ನಾಪತ್ತೆಯಾಗಿದ್ದ ಪ್ರಕರಣಕ್ಕೆ ಇದೀಗ ಟ್ವಿಸ್ಟ್ ಸಿಕ್ಕಿದ್ದು, ಆರು ತಿಂಗಳ ಬಳಿಕ ಅತ್ತೆ ಶಾಂತ ಇದೀಗ ಮನೆಗೆ ಮರಳಿದ್ದಾರೆ. ಚೆನ್ನಗಿರಿ ತಾಲೂಕಿನ ಮುದ್ದೇನಹಳ್ಳಿ ಗ್ರಾಮಕ್ಕೆ ವಾಪಸ್ ಆಗಿದ್ದು ದಾವಣಗೆರೆ ಜಿಲ್ಲೆಯ ಚೆನ್ನಗಿರಿ ತಾಲೂಕಿನ ಮುದ್ದೇನಹಳ್ಳಿ ಗ್ರಾಮದಲ್ಲಿ ಮರಳಿ ಬಂದು ನಾನು ಎಲ್ಲೂ ಹೋಗಿಲ್ಲ ಊರಿನಲ್ಲಿಯೇ ಇದ್ದೇನೆ ಆದರೆ ಅಳಿಯ ಎಲ್ಲಿ ಹೋಗಿದ್ದಾನೋ ನನಗೆ ಗೊತ್ತಿಲ್ಲ ಎಂದು ತಿಳಿಸಿದ್ದಾರೆ.

ಅಷ್ಟೇ ಅಲ್ಲದೆ, ಪತಿ ನಾಗರಾಜ್ ಹಾಗೂ ಮಕ್ಕಳು ನನ್ನಿಂದ ಸಾಲ ಮಾಡಿಸಿ ಹಿಂಸೆ ಕೊಟ್ಟು, ಮಾರಣಾಂತಿಕವಾಗಿ ಹಲ್ಲೆ ಮಾಡಿ, ನನ್ನನ್ನು ಓಡಿಸಿದ್ದಾರೆ. ಅವರ ಹಿಂಸೆ ತಡೆಯಲಾರದೆ ನಾನು ಓಡಿ ಹೋಗಿದ್ದೆ. ಆದರೆ ಇದೀಗ ನನ್ನ ಮೇಲೆ ಆರೋಪ ಹೋರೆಸುತ್ತಿದ್ದಾರೆ ಎಂದು ಶಾಂತಾ ಆರೋಪಿಸಿದ್ದಾಳೆ.

ಇದನ್ನೂ ಓದಿ;MP: ಲಂಬಕೋನ ಆಕಾರದಲ್ಲಿ ಅವೈಜ್ಞಾನಿಕ ರೈಲ್ವೆ ಸೇತುವೆ ನಿರ್ಮಾಣ – 8 ಎಂಜಿನಿಯರ್ ಗಳು ಸಸ್ಪೆಂಡ್

Comments are closed.