Kasaragod: ಮದ್ಯಪಾನ ಮಾಡಿ ಕಾರು ಚಲಾಯಿಸಿದ ಶಾಲಾ ಮುಖ್ಯೋಪಾಧ್ಯಾಯಿನಿ ಅರೆಸ್ಟ್

Kasaragod: ಮದ್ಯಪಾನ ಮಾಡಿ ಕಾರು ಚಲಾಯಿಸಿದ ಶಾಲಾ ಮುಖ್ಯೋಪಾಧ್ಯಾಯಿನಿ ಜಿಲ್ಲೆಯಲ್ಲಿ ಪೊಲೀಸ್ ಬಲೆಗೆ ಬಿದ್ದ ಘಟನೆ ವರದಿಯಾಗಿದೆ.

ಗುರುವಾರ ಕಾಂಞಗಾಡಿನ ರಾ.ಹೆದ್ದಾರಿಯ ಐಂಬೋತ್ ಎಂಬಲ್ಲಿ ಪೊಲೀಸರು ವಾಹನ ತಪಾಸಣೆ ಮಾಡುತ್ತಿದ್ದ ಸಮಯದಲ್ಲಿ ಕಾರೊಂದು ಅತಿವೇಗದಲ್ಲಿ ಬರುತ್ತಿರುವುದನ್ನು ಕಂಡು ಕಾರನ್ನು ತಡೆದು ನಿಲ್ಲಿಸಿ ಚಾಲಕಿಯನ್ನು ಬೈತ್ಲೇಸರ್ ಮೂಲಕ ಪರಿಶೋಧನೆ ಮಾಡಿದಾಗ ಮದ್ಯಪಾನ ಮಾಡಿರುವುದು ಸಾಬೀತಾಗಿದೆ.
ಚಾಲಕಿ ಶಾಲೆಯೊಂದರ ಮುಖ್ಯೋಪಾಧ್ಯಾಯಿನಿಯಾಗಿದ್ದು ಪೊಲೀಸರು ಕಾರು ಸಹಿತ ವಶಕ್ಕೆ ಪಡೆಯಲಾಗಿದೆ.
Comments are closed.