Political : ಸಹೋದರ ಡಿ ಕೆ ಸುರೇಶ್ ಅವರನ್ನು KMF ಅಧ್ಯಕ್ಷ ಮಾಡಲು ಡಿಕೆಶಿಗೆ ಸಿದ್ದು ಅಡ್ಡಿ?

Political : ರಾಜ್ಯ ರಾಜಕೀಯದಲ್ಲಿ ಡಿಕೆ ಶಿವಕುಮಾರ್ ಮತ್ತು ಡಿಕೆ ಸುರೇಶ್ ಸಹೋದರರ ವರ್ಚಸ್ಸು ತುಂಬಾ ಪ್ರಭಾವ ಬೀರುತ್ತಿದೆ. ಕಳೆದ ಲೋಕಸಭಾ ಚುನಾವಣೆಯಲ್ಲಿ ಹೀನಾಯವಾಗಿ ಸೋತ ತಮ್ಮ ಸುರೇಶ್ ಅವರನ್ನು ಹೇಗಾದರೂ ಮಾಡಿ ಮತ್ತೆ ರಾಜಕೀಯಕ್ಕೆ ಕರೆತರಬೇಕೆಂದು ಡಿಕೆ ಶಿವಕುಮಾರ್ ಅವರು ಸಾಕಷ್ಟು ಪ್ರಯತ್ನ ನಡೆಸುತ್ತಿದ್ದಾರೆ. ಅವರ ಪ್ರಯತ್ನಕ್ಕೆ ಸಿದ್ದರಾಮಯ್ಯ ಅವರು ಅಡ್ಡಿ ಮಾಡುತ್ತಿದ್ದಾರೆ ಎಂಬ ಆರೋಪವನ್ನು ಕೇಳಿಬಂದಿದೆ.

ರಾಜ್ಯದಲ್ಲಿ ಒಂದೆಡೆ ಸಿದ್ದರಾಮಯ್ಯ ಬಣ, ಇನ್ನೊಂದೆಡೆ ಡಿಕೆಶಿ ಬಣದ ಮೂಲಕ @INCKarnataka ಸಮ್ಮಿಶ್ರ ಸರ್ಕಾರ ನಡೆಸುತ್ತಿದೆ. ಇದೀಗ ಪ್ರತಿಷ್ಠಿತ ಕೆಎಂಎಫ್ ಅಧ್ಯಕ್ಷಗಿರಿಗೂ ಎರಡು ಬಣದ ಪೈಪೋಟಿ ಆರಂಭವಾಗಿದೆ.
ಶಾಸಕರನ್ನು ತನ್ನ ಅಂಕೆಯಲ್ಲಿಟ್ಟುಕೊಂಡು ಆಟವಾಡುತ್ತಿರುವ @siddaramaiah ಅವರ ಹೊಸ ಆಟಕ್ಕೆ ಡಿಸಿಎಂ @DKShivakumar ಬೆಸ್ತು… pic.twitter.com/MlolNeL13U
— BJP Karnataka (@BJP4Karnataka) June 28, 2025
ಹೌದು, ಡಿಕೆ ಸುರೇಶ್ ಅವರನ್ನು ಕೆಎಂಎಫ್ ಅಧ್ಯಕ್ಷರನ್ನಾಗಿ ಮಾಡಿ ರಾಜ್ಯ ರಾಜಕೀಯದಲ್ಲಿ ಸಕ್ರಿಯರನ್ನಾಗಿಸಲು ಡಿಕೆ ಶಿವಕುಮಾರ್ ಪ್ರಯತ್ನಿಸುತ್ತಿದ್ದಾರೆ. ಇದಕ್ಕೆ ಸಿಎಂ ಸಿದ್ದರಾಮಯ್ಯನವರು ಅಡ್ಡಿಗಾಲು ಹಾಕುತ್ತಿದ್ದಾರೆ ಎಂದು ಬಿಜೆಪಿಯು ವ್ಯಂಗ್ಯವಾಡಿದೆ. ಈ ಕುರಿತಾಗಿ ಪೋಸ್ಟ್ ಅನ್ನು ಕೂಡ ಹಂಚಿಕೊಂಡಿದೆ.
ಬಿಜೆಪಿ ಪೋಸ್ಟ್ ನಲ್ಲಿ ಏನಿದೆ?
ರಾಜ್ಯದಲ್ಲಿ ಒಂದೆಡೆ ಸಿದ್ದರಾಮಯ್ಯ ಬಣ, ಇನ್ನೊಂದೆಡೆ ಡಿ.ಕೆ ಶಿವಕುಮಾರ್ ಬಣದ ಮೂಲಕ ಸಮ್ಮಿಶ್ರ ಸರ್ಕಾರ ನಡೆಸುತ್ತಿದೆ. ಇದೀಗ ಪ್ರತಿಷ್ಠಿತ ಕೆಎಂಎಫ್ ಅಧ್ಯಕ್ಷಗಿರಿಗೂ ಎರಡು ಬಣದ ಪೈಪೋಟಿ ಆರಂಭವಾಗಿದೆ. ಶಾಸಕರನ್ನು ತನ್ನ ಅಂಕೆಯಲ್ಲಿಟ್ಟುಕೊಂಡು ಆಟವಾಡುತ್ತಿರುವ ಸಿದ್ದರಾಮಯ್ಯ ಅವರ ಹೊಸ ಆಟಕ್ಕೆ ಡಿಸಿಎಂ ಡಿ.ಕೆ ಶಿವಕುಮಾರ್ ಬೆಸ್ತು ಬಿದ್ದಿದ್ದಾರೆ ಎಂದು ಬಿಜೆಪಿ ವ್ಯಂಗ್ಯವಾಡಿದೆ.
ಅಲ್ಲದೆ ವಲಸಿಗ ಸಿದ್ದರಾಮಯ್ಯ ಅವರಿಂದ ಡಿಕೆಶಿಯ ಸಿಎಂ ಕುರ್ಚಿ ಕನಸು ಕನಸಾಗಿಯೇ ಉಳಿದಿದೆ. ಇದೀಗ ತಮ್ಮ ಸಹೋದರ ಡಿ.ಕೆ ಸುರೇಶ್ ಅವರನ್ನು ಕೆಎಂಎಫ್ ಅಧ್ಯಕ್ಷರನ್ನಾಗಿ ಮಾಡುವ ಡಿಕೆಶಿ ಪ್ರಯತ್ನಕ್ಕೂ ಸಿದ್ದರಾಮಯ್ಯ ಅಡ್ಡಗಾಲು ಹಾಕಿದ್ದಾರೆ. ಒಟ್ಟಿನಲ್ಲಿ ಸಿದ್ದರಾಮಯ್ಯ ಮತ್ತು ಡಿ.ಕೆ ಶಿವಕುಮಾರ್ ಅವರ ಕುರ್ಚಿ ಕಾಳಗದಲ್ಲಿ ರಾಜ್ಯದಲ್ಲಿ ಅಭಿವೃದ್ಧಿ ಎಂಬುದೇ ಮರೀಚಿಕೆಯಾಗಿದೆ ಎಂದು ಬಿಜೆಪಿ ಕಾಂಗ್ರೆಸ್ ವಿರುದ್ಧ ಲೇವಡಿ ಮಾಡಿದ್ದಾರೆ.
Comments are closed.