Udupi: 25 ವರ್ಷದ ಹಳೆಯ ಬೈಕ್ ನಲ್ಲಿ ಅಪ್ಪನನ್ನು ಕೂರಿಸಿಕೊಂಡು ದೇಶ ಸುತ್ತಿದ ಉಡುಪಿಯ ಬೈಕ್ ರೈಡರ್ – ತಂದೆ-ಮಗನಿಗೆ 10 ಲಕ್ಷದ ಬೈಕ್ ಗಿಫ್ಟ್ ಕೊಟ್ಟ ಕಂಪೆನಿ !!

Udupi: ಸುಮಾರು 25 ವರ್ಷಗಳಷ್ಟು ಹಳೆಯದಾದ ಹೀರೋ ಹೋಂಡಾ ಬೈಕಿನಲ್ಲಿ ತನ್ನ ಅಪ್ಪನನ್ನು ಕೂರಿಸಿಕೊಂಡು ಇಡೀ ದೇಶವನ್ನು ಸುತ್ತಿಸಿದ ಮಗನಿಗೆ ಹೀರೋ ಮೋಟೋ ಕಾರ್ಪ್ ಸಂಸ್ಥೆ ಬರೋಬ್ಬರಿ 14 ಲಕ್ಷದ ಹೊಸ ಬೈಕ್ ನೀಡಿ ಗೌರವಿಸಿದೆ.

ಹೌದು, ಉಡುಪಿಯ ಕಾಪು ತಾಲೂಕಿನ ಶಿರ್ವ ನಿವಾಸಿ ಪ್ರಜ್ವಲ್ ಶೆಣೈ ಅವರು ದುರ್ಗಮ ಹಾದಿಯಲ್ಲಿ ತಮ್ಮ 25 ವರ್ಷ ಹಳೆಯ ಹೀರೋ ಹೊಂಡಾ ಸ್ಟೆಂಡರ್ ಬೈಕ್‌ನಲ್ಲಿ ಸಂಚರಿಸಿ ಸುಮಾರು 17,982 ಎತ್ತರವಿರುವ ವಿಶ್ವದ 2ನೇ ಅತೀ ಎತ್ತರದ ಪ್ರದೇಶವಾದ ಜಮ್ಮು ಕಾಶ್ಮೀರದ ಖರ್ದುಂಗ್ಲಾದಲ್ಲಿ ಕನ್ನಡ ಬಾವುಟ ಹಾರಿಸಿ ಕನ್ನಡಾಭಿಮಾನವನ್ನು ಮೆರೆದಿದ್ದರು. ಇದೀಗ ರಾಜೇಂದ್ರ ಶೆಣೈ ಮತ್ತು ಮಗ ಪ್ರಜ್ವಲ್ ಶೆಣೈ ಅವರ ಸಾಹಸವನ್ನು ಗುರುತಿಸಿದ ಹೀರೋ ಮೋಟೋ ಕಾರ್ಪ್ ಸಂಸ್ಥೆ ಸುಮಾರು 14 ಲಕ್ಷ ಬೆಲೆಬಾಳುವ ಹೀರೋ ಸೆಂಟೆನ್ನಿಯಲ್ ಬೈಕ್ ನೀಡಿ ಗೌರವಿಸಿದೆ.
ಅಂದಹಾಗೆ ಹೀರೋ ಹೊಂಡಾ ಸ್ಪ್ಲೆಂಡರ್ ಆ ಕಾಲದ ಸೂಪರ್ ಬೈಕ್. ಮಧ್ಯಮ ವರ್ಗದ ಜನರ ಕನಸಿನ ಬೈಕಾಗಿತ್ತು. ಮೈಲೇಜ್, ಪರ್ಫಾಮೆನ್ಸ್ಗೆ ಸಾಟಿಯಿರಲಿಲ್ಲ. ಇದೇ ಬೈಕ್ ಏರಿ ತಂದೆ-ಮಕ್ಕಳು ದೇಶದ 17 ರಾಜ್ಯ ಪ್ರವಾಸ ಮಾಡಿದ್ದಾರೆ. ಉಡುಪಿಯ ಶಕ್ತಿ ಶೋ ರೂಮ್ನಲ್ಲಿ ಅದ್ಧೂರಿ ಕಾರ್ಯಕ್ರಮ ಮಾಡಿ, ಪ್ರಜ್ವಲ್ ಶೆಣೈ ಅವರಿಗೆ ಬೈಕ್ ಕೀ ಹಸ್ತಾಂತರಿಸಲಾಯಿತು. ಕೇಕ್ ಕಟ್ಟಿಂಗ್ ಮಾಡಿ ತಂದೆ ತಾಯಿಗೆ ಸಿಹಿ ಕೊಟ್ಟಾಗ ಬೈಕರ್ ಪ್ರಜ್ವಲ್ ಶೆಣೈ ಭಾವುಕರಾದರು.
Comments are closed.