Hassan: ಹಾಸನದಲ್ಲಿ ಒಂದೇ ತಿಂಗಳಗೆ 15 ಮಂದಿ ‘ಹೃದಯಾಘಾತಕ್ಕೆ ಬಲಿ – ತನಿಖೆಯಲ್ಲಿ ಸ್ಪೋಟಕ ಸತ್ಯ ಬಯಲು

Hassan : ಇತ್ತೀಚಿನ ದಿನಗಳಲ್ಲಿ ಜನರಲ್ಲಿ ಹೃದಯಘಾತ ಹೆಚ್ಚಾಗಿ ಸಂಭವಿಸುತ್ತಿದೆ. ಅದರಲ್ಲೂ ಯುವಕ ಯುವತಿಯರಲ್ಲೇ ಈ ಪ್ರಕರಣ ಬೆಳಕಿಗೆ ಬರುತ್ತಿರುವುದು ಅಘಾತವನ್ನು ಉಂಟು ಮಾಡಿದೆ. ಇದೀಗ ಆಶ್ಚರ್ಯದ ಹಾಗೂ ಅಘಾತಕಾರಿ ವಿಚಾರವೇನೆಂದರೆ ಕಳೆದ ಒಂದು ತಿಂಗಳಿನಲ್ಲಿ ಹಾಸನ ಜಿಲ್ಲೆಯಲ್ಲಿ ಬರೋಬ್ಬರಿ 15 ಮಂದಿ ಹೃದಯಘಾತಕ್ಕೆ ಬಲಿಯಾಗಿದ್ದಾರೆ. ಈ ಕುರಿತು ತನಿಖೆ ನಡೆದಿದ್ದು ಸ್ಪೋಟಕ ಅಂಶವೊಂದು ಬಯಲಾಗಿದೆ.

ಹೌದು, ಕಳೆದ ಒಂದು ತಿಂಗಳಲ್ಲಿ ಹಾಸನ ಜಿಲ್ಲೆ ಒಂದರಲ್ಲಿ 15 ಜನರು ಹೃದಯಘಾತಕ್ಕೆ ಬಲಿಯಾಗಿದ್ದಾರೆ ಇದು ಅತ್ಯಂತ ಆತಂಕಕಾರಿ ವಿಷಯವಾಗಿದ್ದು ಈ ವಿಚಾರವಾಗಿ, ರಾಜಾರಾಂ ಎನ್ನುವವರು ಸಿಎಂ ಸಿದ್ದರಾಮಯ್ಯ ಅವರಿಗೆ ಪತ್ರ ಬರೆದು ತನಿಖೆ ನಡೆಸುವಂತೆ ಮನವಿ ಮಾಡಿಕೊಂಡಿದ್ದರು. ಇದೀಗ ತನಿಖೆಯಲ್ಲಿ ಸ್ಫೋಟಕವಾದ ಅಂಶ ಬಯಲಾಗಿದ್ದು 10 ನುರಿತ ವೈದ್ಯರ ತಂಡ ಯುವಕರ ಹಠಾತ್ ಸಾವಿನ ಬಗ್ಗೆ ತನಿಖೆ ನಡೆಸಿದೆ. 18 ರಿಂದ 45 ವರ್ಷದೊಳಗಡೆ ಹೃದಯಾಘಾತದಿಂದ ಸಾವನ್ನಪ್ಪಿದ 250 ಮಂದಿಯ ಸಾವಿನ ವರದಿಯನ್ನು ತನಿಖೆಗೊಳಪಡಿಸಿ, ನಾಲ್ಕು ತಿಂಗಳುಗಳ ಕಾಲ ಅಧ್ಯಯನ ನಡೆಸಿ ಧೂಮಪಾನ, ಮದ್ಯಪಾನ, ವಿಮಲ್ ಗುಟ್ಕಾ ಸೇವನೆಯಿಂದ ಹಾಗೂ ಇತರೆ ಕಾಯಿಲೆಗಳಿಂದ ಹೃದಯಘಾತದಿಂದ ಸಾವನಪ್ಪಿದ್ದಾರೆ ಎಂದು ಉಲ್ಲೇಖಿಸಲಾಗಿದೆ.
ಇದನ್ನೂ ಓದಿ: ಹೊಸ ಆದಾಯ ತೆರಿಗೆ ನಿಯಮ ಜಾರಿ: ಸುಳ್ಳು ಮಾಹಿತಿಗೆ 200% ದಂಡ, 24% ವರೆಗೆ ಬಡ್ಡಿ, ಜೈಲು ಖಾತರಿ
Comments are closed.