Tirupati : ತಿರುಪತಿಯಲ್ಲಿ ಈ 3 ದಿನ ಕಮ್ಮಿ ಇರುತ್ತೆ ಭಕ್ತರ ದಟ್ಟಣಿ – ಯಾವಾಗ ಎಂದು ಈಗಲೇ ನೋಡಿ, ಟಿಕೆಟ್ ಬುಕ್ ಮಾಡಿ

Tirupati : ವಿಶ್ವದ ಹಿಂದೂಗಳ ಪವಿತ್ರ ಧಾರ್ಮಿಕ ಪೂಜಾಕೇಂದ್ರ, ಆಂಧ್ರ ಪ್ರದೇಶದ ತಿರುಪತಿಯಲ್ಲಿರುವ ತಿರುಮಲ ತಿರುಪತಿ ದೇವಾಲಕ್ಕೆ ಸಂಬಂಧ ಪಟ್ಟಂತಹ ಸುದ್ದಿಗಳು ಸದಾ ವೈರಲ್ ಆಗುತ್ತಿರುತ್ತವೆ. ಇದೀಗ ತಿರುಪತಿಯಲ್ಲಿ ಭಕ್ತರ ದಟ್ಟಣಿ ಯಾವ ಸಂದರ್ಭದಲ್ಲಿ ಕಡಿಮೆ ಇರುತ್ತದೆ ಎಂಬ ವಿಚಾರ ರಿವಿಲ್ ಆಗಿದೆ.

ಹೌದು, ಟಿಟಿಡಿಯ (Tirumala Tirupati Devasthanams) ಸದಸ್ಯರು ಮತ್ತು ಟಿಟಿಡಿ ವಿಜಿಲೆನ್ಸ್ ಕಮಿಟಿಯ ಅಧ್ಯಕ್ಷರೂ ಆಗಿರುವಂತಹ ಎಸ್ ನರೇಶ್ ಕುಮಾರ್ ‘ವಿಜಯ ಕರ್ನಾಟಕ’ ಜೊತೆ ಮಾತನಾಡಿದ್ದು ತಿರುಪತಿ ಕುರಿತು ಹಲವು ವಿಚಾರಗಳನ್ನು ಹಂಚಿಕೊಂಡಿದ್ದಾರೆ. ಈ ವೇಳೆ ಅವರು ತಿರುಪತಿಯಲ್ಲಿ ಈ ಮೂರು ದಿನಗಳ ಕಾಲ ಭಕ್ತರದ ಟಾನಿಕ್ ಕಮ್ಮಿ ಇರುತ್ತದೆ ಎಂಬ ಅಂಶವನ್ನು ಹೊರಹಾಕಿದ್ದಾರೆ.
ಈ ಕುರಿತಾಗಿ ಮಾತನಾಡಿದವರು ಭಕ್ತರ ದಟ್ಟಣಿ ಕಮ್ಮಿ ಎಂದಲ್ಲ, ಬೇರೆ ದಿನಗಳಿಗೆ ಹೋಲಿಸಿದರೆ ಜನ ಕಮ್ಮಿಇರುತ್ತಾರೆ ಅಷ್ಟೇ. ಒಂದು, ಯುಗಾದಿಯ ಮರುದಿನ, ಪ್ರಮುಖವಾಗಿ ಕರ್ನಾಟಕ ಮತ್ತು ಆಂಧ್ರ ಪ್ರದೇಶದಲ್ಲಿ ಹೊಸದೊಡಕು ಆಚರಣೆ ಇರುವುದರಿಂದ ಜನ ಸ್ವಲ್ಪ ಕಮ್ಮಿ ಇರುತ್ತಾರೆ. ಇನ್ನೊಂದು, ಮಹಾಲಯ ಅಮಾವಾಸ್ಯೆಯ ದಿನದಂದು. ಅಂದು ಕೂಡಾ, ಎಡೆ ಇಡುವ ಪದ್ದತಿ ಇರುವುದರಿಂದ, ಜನ ಕಮ್ಮಿ ಇರುತ್ತಾರೆ. ಇನ್ನೊಂದು, ದೀಪಾವಳಿ ಅಮಾವಾಸ್ಯೆಯ ದಿನವೂ ಭಕ್ತರ ಸಂಖ್ಯೆ ಕಮ್ಮಿ ಇರುತ್ತದೆ ಎಂದಿದ್ದಾರೆ.
Comments are closed.