Bengaluru : ಬೆಂಗಳೂರಿನಲ್ಲಿ ನಿರ್ಮಾಣಗೊಳ್ಳಲಿದೆ 60 ಸಾವಿರ ಸೀಟ್‌ನ ಬೃಹತ್ ಸ್ಟೇಡಿಯಂ – 50 ಎಕರೆ ಜಾಗ ಮಂಜೂರು ಮಾಡಿದ ಸರ್ಕಾರ

Bengaluru : ಆರ್‌ಸಿಬಿ ಗೆಲುವಿನ ಬಳಿಕ ಬೆಂಗಳೂರಿನಲ್ಲಿ ನಡೆದ ಎಡವಟ್ಟಿನಿಂದಾಗಿ ಎಚ್ಚೆತ್ತುಕೊಂಡ ರಾಜ್ಯ ಸರ್ಕಾರವು ಬೆಂಗಳೂರಿನಲ್ಲಿ ಹೊಸ ಸ್ಟೇಡಿಯಂ ನಿರ್ಮಾಣಕ್ಕೆ ಮುಂದಾಗಿದೆ.

ಹೌದು, ಚಿನ್ನಸ್ವಾಮಿ ಸ್ಟೇಡಿಯಂ ಈಗ ನಗರದ ಹೃದಯ ಭಾಗದಲ್ಲಿದ್ದು, ಅದರ ಸ್ಥಳಾಂತರವಾದರೆ, ಸಾಕಷ್ಟು ಸಂಚಾರ ದಟ್ಟಣೆ ಕಡಿಮೆಯಾಗಲಿದೆ ಎಂಬ ಮಾತುಗಳು ಕೇಳಿಬರುತ್ತಿವೆ. ಹೀಗಾಗಿ ಸುಮಾರು 60,000 ಪ್ರೇಕ್ಷಕರ ಸಾಮರ್ಥ್ಯದ ಈ ಸ್ಟೇಡಿಯಂಗಾಗಿ 50 ಎಕರೆ ಜಾಗವನ್ನು ಈಗಾಗಲೇ ಗುರುತಿಸಲಾಗಿದೆ, ಆದರೆ ಸ್ಥಳದ ವಿವರವನ್ನು ಇನ್ನೂ ರಾಜ್ಯ ಸರ್ಕಾರ ಬಹಿರಂಗಪಡಿಸಲಾಗಿಲ್ಲ.
ಒಂದು ವೇಳೆ ನೂತನ ಸ್ಟೇಡಿಯಂ ನಿರ್ಮಾಣಗೊಂಡ ನಂತರ ಈಗೀರುವ ಸ್ಟೇಡಿಯಂ ಅನ್ನು ಸಂಪೂರ್ಣವಾಗಿ ಸ್ಥಳಾಂತರಿಸುವ ಯೋಜನೆ ರಾಜ್ಯ ಸರ್ಕಾರ ಹೊಂದಿದೆ ಎನ್ನಲಾಗಿದೆ. ಇದರಿಂದ ಅಂತರರಾಷ್ಟ್ರೀಯ ಪಂದ್ಯ ವೀಕ್ಷಣೆ ಸಂದರ್ಭದಲ್ಲಿ ಸೇರುವ ಪ್ರೇಕ್ಷರಿಂದ ಆಗುವ ಜನಸಂದಣಿ, ಟ್ರಾಫಿಕ್ ಜಾಮ್ ಸೇರಿದಂತೆ ಹಲವು ಸಮಸ್ಯೆಗಳನ್ನು ಬಗೆಹರಿಸಿದಂತಾಗುತ್ತದೆ ಎನ್ನಲಾಗಿದೆ.
Comments are closed.