Puttur: ಪುತ್ತೂರು ಮರಾಟಿ ಸಮಾಜ ಸೇವಾ ಸಂಘದಿಂದ ಜು. 13 ರಂದು ‘ವಧು-ವರಾನ್ವೇಷಣಾ ಸಮಾವೇಶ-2025!

Share the Article

Puttur: ಕೊಂಬೆಟ್ಟು ಮರಾಟಿ ಸಮಾಜ

ಸೇವಾ ಸಂಘದ ಆಶ್ರಯದಲ್ಲಿ ಮರಾಟಿ ಮಹಿಳಾ ವೇದಿಕೆ ಹಾಗೂ ಯುವ ವೇದಿಕೆ ಸಹಭಾಗಿತ್ವದಲ್ಲಿ ವಧು-ವರಾನ್ವೇಷಣಾ ಸಮಾವೇಶ-2025 ಜು.13 ಭಾನುವಾರ ಕೊಂಬೆಟ್ಟು ಮರಾಟಿ ಸಮಾಜ ಮಂದಿರದಲ್ಲಿ ನಡೆಯಲಿದೆ ಎಂದು ಮರಾಟಿ ಸಮಾಜ ಸೇವಾ ಸಂಘದ ಅಧ್ಯಕ್ಷ ಎನ್.ದುಗ್ಗಪ್ಪ ನಾಯ್ಕ ಬಡಾವು ತಿಳಿಸಿದರು.

ಶುಕ್ರವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ಈಗಾಗಲೇ ಸಂಘ ಸ್ವಜಾತಿ ವಿದ್ಯಾರ್ಥಿಗಳಿಗೆ ವಾರ್ಷಿಕ ಪ್ರತಿಭಾ ಪುರಸ್ಕಾರ, ವಿದ್ಯಾರ್ಥಿ ವೇತನ ವಾರ್ಷಿಕ ಕ್ರೀಡಾಕೂಟ, ಧಾರ್ಮಿಕ ಕಾರ್ಯಕ್ರಮಗಳು, ಪ್ರಾಕೃತಿಕ ವಿಕೋಪ ಪೀಡಿತರು, ಅನಾರೋಗ್ಯ ಪೀಡಿತರಿಗೆ ನಗದು ರೂಪದಲ್ಲಿ ಧನಸಹಾಯ ನೀಡುವ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುತ್ತಾ ಬಂದಿದ್ದು, ಇದೀಗ ಚೊಚ್ಚಲ ವಧು-ವರಾನ್ವೇಷಣೆ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ. ಇತ್ತೀಚಿನ ದಿನಗಳಲ್ಲಿ ಯುವಕ-ಯುವತಿಯರು ದೂರದ ಪಟ್ಟಣಗಳಿಗೆ ಉದ್ಯೋಗಸ್ಥರಾಗಿ ಅಥವಾ ಸ್ವ ಉದ್ಯೋಗ ಮುನ್ನಡೆಸಿಕೊಂಡು ಹೋಗುತ್ತಿದ್ದು, ಅಂತವರಿಗೆ ತ್ವರಿತಗತಿಯಲ್ಲಿ ಕಂಕಣಭಾಗ್ಯದ ಅವಕಾಶ ಹೊಂದುವವರು ತಮ್ಮ ಹೆತ್ತವರ, ಪೋಷಕರ ಸಮ್ಮುಖದಲ್ಲಿ ಯುವಕ-ಯುವತಿಯರನ್ನು ಮುಖಾಮುಖಿಯಾಗಿ ವಿಚಾರ ವಿನಿಮಯದೊಂದಿಗೆ ವಿವಾಹ ಬಂಧನಕ್ಕೆ ಅವಕಾಶ ಒದಗಿಸಲಾಗುತ್ತದೆ ಎಂದು ತಿಳಿಸಿದರು.

ಇದನ್ನೂ ಓದಿ: Kodishree: ಕೋಡಿಮಠದ ಸ್ವಾಮೀಜಿ ಬಳಿ ಚಿನ್ನಾಭರಣ ಕಳವು ಮಾಡಿದ್ದ ಅಂತರಾಜ್ಯ ಕಳ್ಳನ ಬಂಧನ

Comments are closed.