Home News Karnataka Police: ರಾಜ್ಯದ ಪೇದೆಗಳಿಗೆ ಹೊಸ ಟೋಪಿ: ತೆಲಂಗಾಣ ಶೈಲಿಯ ತೆಳು ಟೋಪಿಗೆ ಸಿಎಂ ಅಸ್ತು

Karnataka Police: ರಾಜ್ಯದ ಪೇದೆಗಳಿಗೆ ಹೊಸ ಟೋಪಿ: ತೆಲಂಗಾಣ ಶೈಲಿಯ ತೆಳು ಟೋಪಿಗೆ ಸಿಎಂ ಅಸ್ತು

Hindu neighbor gifts plot of land

Hindu neighbour gifts land to Muslim journalist

Karnataka Police: ರಾಜ್ಯದ ಪೊಲೀಸ್‌ ಹಾಗೂ ಮುಖ್ಯ ಪೇದೆಗಳ ಟೋಪಿಯಲ್ಲಿ ಬದಲಾವಣೆ ಆಗಲಿದೆ. ಈ ಕುರಿತು ತೀರ್ಮಾನವು ರಾಜ್ಯ ಪೊಲೀಸ್‌ ಇಲಾಖೆಯ ಸಮವಸ್ತ್ರದಲ್ಲಿ ಬದಲಾವಣೆ ಮಾಡುವುದು ಪ್ರಮುಖ ಹೆಜ್ಜೆಯಾಗಿದೆ.

ರಾಜ್ಯ ಪೊಲೀಸ್ ಇಲಾಖೆಯಲ್ಲಿ ಕಾನ್‌ಸ್ಟೇಬಲ್‌ ಹಾಗೂ ಹೆಡ್ ಕಾನ್‌ಸ್ಟೇಬಲ್‌ಗಳಿಗೆ ‘ಸ್ಲೋಚ್ ಕ್ಯಾಪ್’ಗೆ ಪರ್ಯಾಯವಾಗಿ ತೆಲಂಗಾಣ ಪೊಲೀಸರ ಮಾದರಿಯ ತೆಳುವಾದ ಟೋಪಿಯನ್ನು ಆಯ್ಕೆ ಮಾಡಲಾಗಿದೆ.

ರಾಜ್ಯದ ಕಾನ್ಸ್‌ಟೇಬಲ್‌ ಮತ್ತು ಹೆಡ್‌ಕಾನ್ಸ್‌ಟೇಬಲ್‌ಗೆ ಒದಗಿಸಲು ಮುಖ್ಯಮಂತ್ರಿ ಸಿದ್ದರಾಮಯ್ಯ ಅನುಮತಿ ನೀಡಿದ್ದಾರೆ.

ಪೊಲೀಸ್‌ ಕೇಂದ್ರ ಕಚೇರಿಯಲ್ಲಿ ನಡೆದ ವಾರ್ಷಿಕ ಪೊಲೀಸ್‌ ಅಧಿಕಾರಿಗಳ ಸಮಾವೇಶದಲ್ಲಿ ಶುಕ್ರವಾರ ಒಪ್ಪಿಗೆ ನೀಡಿದರು. ಈ ಸಂದರ್ಭದಲ್ಲಿ ಕೇರಳ, ತಮಿಳುನಾಡು, ಆಂಧ್ರಪ್ರದೇಶ, ಮಹಾರಾಷ್ಟ್ರ, ತೆಲಂಗಾಣ ರಾಜ್ಯಗಳ ಪೊಲೀಸರು ಬಳಸುವ ವಿವಿಧ ಟೋಪಿಗಳನ್ನು ಪ್ರದರ್ಶನಕ್ಕಿಡಲಾಗಿತ್ತು. ಎಲ್ಲಾ ಟೋಪಿಗಳನ್ನು ಪರಿಶೀಲನೆ ಮಾಡಿ ನಂತರ ತೆಲಂಗಾಣ ಪೊಲೀಸರ ತೆಳುವಾದ ಮತ್ತು ಧರಿಸಲು ಸುಲಭವಾದ ಕ್ಯಾಪ್‌ಗೆ ಒಪ್ಪಿಗೆ ನೀಡಲಾಗಿದೆ.

ಇದನ್ನೂ ಓದಿ: Petrol Bunk: ಪೆಟ್ರೊಲ್ ಬಂಕ್’ನಲ್ಲಿ ಫೋನ್ ಸ್ವಿಚ್ ಆಫ್ ಮಾಡಬೇಕಾ? ಏರ್ ಪ್ಲೇನ್ ಮೋಡ್ ಸಾಕಾ?