Puttur: ಪುತ್ತೂರು: ಸಾಮಾಜಿಕ ಕಾರ್ಯಕರ್ತ ಸುದರ್ಶನ ಪುತ್ತೂರು ಮೇಲೆ ಹಲ್ಲೆಗೆ ಯತ್ನ

Share the Article

Puttur: ಪಡ್ನೂರು ಗ್ರಾಮದ ನಿವಾಸಿ ಸುದರ್ಶನ ಗೌಡ ಪುತ್ತೂರು ಇವರ ಮೇಲೆ ಹಲ್ಲೆ ಯತ್ನ ನಡೆದಿರುವುದಾಗಿ ಆರೋಪಿಸಿ ಪುತ್ತೂರು ನಗರ ಠಾಣೆಯಲ್ಲಿ ದೂರು ದಾಖಲಾಗಿದೆ.

ಜೂನ್‌ 27 ರ ಮಧ್ಯಾಹ್ನ 12 ಗಂಟೆ ಸುಮಾರಿಗೆ ಪಡ್ನೂರು ಗ್ರಾಮದ ಕೊಡಂಗೆ ಎಂಬಲ್ಲಿ ಪಂಚಾಯತ್‌ ಅಧಿಕಾರಿಗಳು, ಜಿಲ್ಲಾ ಪಂಚಾಯತ್‌ ಅಭಿಯಂತರರು, ಪಂಚಾಯತ್‌ ಜನಪ್ರತಿನಿಧಿಗಳು ಪಂಚಾಯತ್‌ ರಸ್ತೆ ಅಳತೆಗೆ ಬಂದಾಗ ಕೊಡಂಗೆ ನಿವಸಿ ನಿತೇಶ್‌ ಹಲ್ಲೆಗೆ ಯತ್ನಿಸಿ ಕೊಲೆ ಬೆದರಿಕೆ ಒಡ್ಡಿದ್ದಾನೆ. ಕೆಲವೇ ದಿನಗಳಲ್ಲಿ ಕಾರು ಹತ್ತಿಸಿ ಕೊಲೆಗೈಯುವ ಬೆದರಿಕೆ ಹಾಕಿದ್ದಾನೆ ಎಂದು ಸುದರ್ಶನ ಅವರ ನೀಡಿದ ದೂರಿನಲ್ಲಿ ತಿಳಿಸಲಾಗಿದೆ.

ಪುತ್ತೂರು ನಗರ ಬಿಜೆಪಿ ಯುವ ಮೋರ್ಚಾ ಅಧ್ಯಕ್ಷನಾಗಿದ್ದು, ನನ್ನ ಮೇಲೆ ಹಲ್ಲೆ ನಡೆಸುವ ಸಾಧ್ಯತೆ ಇರುವುದರಿಂದ ಕ್ರಮ ಕೈಗೊಳ್ಳಲು ದೂರಿನಲ್ಲಿ ಉಲ್ಲೇಖ ಮಾಡಲಾಗಿರುವ ಕುರಿತು ವರದಿಯಾಗಿದೆ.

ಇದನ್ನೂ ಓದಿ: Air India crash: ಏರ್‌ ಇಂಡಿಯಾ ಅಪಘಾತ : ಮೃತಪಟ್ಟವರ ಕುಟುಂಬಸ್ಥರಿಗೆ ₹500 ಕೋಟಿ ನಿಧಿ – ಟ್ರಸ್ಟ್ ಸ್ಥಾಪಿಸಲು ಟಾಟಾ ಸನ್ಸ್‌ ಯೋಜನೆ

Comments are closed.