ಸಿಎಂ ಬೆಂಗಾವಲಿನ 19 ವಾಹನಗಳಿಗೆ ಡೀಸೆಲ್ ಬದಲು ನೀರು ತುಂಬಿಸಿದ ಪೆಟ್ರೋಲ್ ಬಂಕ್!

Share the Article

ಭೋಪಾಲ್‌: ಮುಖ್ಯಮಂತ್ರಿಯವರ ಬೆಂಗಾವಲು ಪಡೆಯ 19 ವಾಹನಗಳಿಗೆ ಡೀಸೆಲ್ ತುಂಬಿಸಿದ ನಂತರ ಅವು ಏಕಾಏಕಿ ಒಂದರ ನಂತರ ಒಂದು ಕೆಟ್ಟು ನಿಂತ ಘಟನೆ ನಡೆದಿದೆ.

ಮಧ್ಯಪ್ರದೇಶದ ಮುಖ್ಯಮಂತ್ರಿ ಮೋಹನ್ ಯಾದವ್ ಗುರುವಾರ ಸಂಜೆ ರತ್ನಂಗೆ ತೆರಳಿದ್ದರು. ಮೋಹನ್ ಯಾದವ್ ರವರ ಬೆಂಗಾವಲು ಪಡೆಯ 19 ವಾಹನಗಳಿಗೆ ಪೆಟ್ರೋಲ್ ಬಂಕ್’ನಿಂದ ಡೀಸೆಲ್ ತುಂಬಿಸಲಾಗಿತ್ತು, ಗಾಡಿಗಳು ಸ್ವಲ್ಪ ದೂರ ಕ್ರಮಿಸಿದ ನಂತರ, ಎಲ್ಲಾ ಇದ್ದಕ್ಕಿದ್ದಂತೆ ನಿಂತವು. ನಂತರ ಅವುಗಳನ್ನು ತಳ್ಳಿ ರಸ್ತೆಯ ಬದಿಯಲ್ಲಿ ನಿಲ್ಲಿಸಬೇಕಾಯಿತು. ಡೀಸೆಲ್‌ ಕಲಬೆರಕೆಯಿಂದಾಗಿ ಮುಖ್ಯಮಂತ್ರಿ ಬೆಂಗಾವಲಿನ 19 ವಾಹನಗಳನ್ನು ನಿಲ್ಲಿಸಿ ಅವುಗಳನ್ನು ಹೊರಗೆ ಕರೆದೊಯ್ಯಲಾಯಿತು ಎಂದು ಕಾಂಗ್ರೆಸ್ ನಾಯಕ ಕುನಾಲ್ ಚೌಧರಿ ಹೇಳಿದ್ದಾರೆ.

ತದನಂತರ ಸಂಬಂಧಿಸಿದ ಪೆಟ್ರೋಲ್ ಬಂಕ್ ಸೀಜ್ ಮಾಡಲಾಯಿತು. ಭ್ರಷ್ಟಾಚಾರ ಎನ್ನುವಂತದು ಖುದ್ದು ಮುಖ್ಯಮಂತ್ರಿಯನ್ನೂ ಬಿಟ್ಟಿಲ್ಲ ಎಂದು ಕಾಂಗ್ರೆಸ್ ನಾಯಕ ಚೌಧರಿ ವ್ಯಂಗ್ಯವಾಡಿದ್ದಾರೆ.

ಇದನ್ನೂ ಓದಿ: ಕರ್ನಾಟಕ ಪತ್ರಕರ್ತರ ಸಂಘದ ಪುತ್ತೂರು ತಾ|ಘಟಕದ ಸಭೆ

Comments are closed.