Home News Moodabidre: ಮೂಡುಬಿದಿರೆ: ಹಿಂದೂ ಜಾಗರಣ ವೇದಿಕೆ ಮುಖಂಡನ ಬಂಧನ, ಅಪಘಾತ ಸಂದರ್ಭ ಬೆದರಿಸಿ 5 ಲಕ್ಷ...

Moodabidre: ಮೂಡುಬಿದಿರೆ: ಹಿಂದೂ ಜಾಗರಣ ವೇದಿಕೆ ಮುಖಂಡನ ಬಂಧನ, ಅಪಘಾತ ಸಂದರ್ಭ ಬೆದರಿಸಿ 5 ಲಕ್ಷ ರೂ. ಪರಿಹಾರ ಕೊಡಿಸಿದ ಆರೋಪ

Hindu neighbor gifts plot of land

Hindu neighbour gifts land to Muslim journalist

Moodabidre: ಅಪಘಾತ ಪ್ರಕರಣವೊಂದರಲ್ಲಿ ಬಸ್‌ ಮಾಲೀಕರಿಂದ ಹಣ ವಸೂಲಿ ಮಾಡಿದ ಆರೋಪದಲ್ಲಿ ಹಿಂದೂ ಜಾಗರಣ ವೇದಿಕೆಯ ಜಿಲ್ಲಾ ಸಹ ಸಂಚಾಲಯ ಸಮಿತ್‌ರಾಜ್‌ ಧರೆಗುಡ್ಡೆ ಅವರನ್ನು ಮೂಡುಬಿದಿರೆ ಪೊಲೀಸರು ಗುರುವಾರ ಬಂಧನ ಮಾಡಿದ್ದಾರೆ.

ನವೆಂಬರ್‌ 11, 2024 ರಂದು ಖಾಸಗಿ ಬಸ್‌ವೊಂದು ಇಲ್ಲಿನ ಮೈಟ್‌ ಎಂಜಿನಿಯರಿಂಗ್‌ ಕಾಲೇಜು ಎದುರಿನ ರಸ್ತೆಯಲ್ಲಿ ಸ್ಕೂಟರ್‌ಗೆ ಡಿಕ್ಕಿ ಹೊಡೆದು ಇಬ್ಬರು ಗಾಯಗೊಂಡಿದ್ದರು. ಇವರಲ್ಲಿ ಒಬ್ಬರು ಗಂಭೀರ ಗಾಯಗೊಂಡಿದ್ದರು.

ವಿದ್ಯಾರ್ಥಿಗಳು ಹಾಗೂ ಸಾರ್ವಜನಿಕರು ಸ್ಥಳದಲ್ಲಿ ಜಮಾಯಿಸಿ ವಾಹನ ಸಂಚಾರಕ್ಕೆ ತಡೆಯೊಡ್ಡಿದ್ದರಿಂದ ಉದ್ರಿಕ್ತ ವಾತಾವರಣ ಉಂಟಾಗಿತ್ತು. ಈ ಸಂದರ್ಭ ಸ್ಥಳದಲ್ಲಿದ್ದ ಸಮಿತ್‌ರಾಜ್‌, ಮಾಲೀಕ ರಫೀಕ್‌ ಅವರಿಂದ ಗಾಯಾಳುಗಳಿಗೆ ರೂ.5 ಲಕ್ಷ ಕೊಡಿಸಿದ್ದರು.

ʼಸಮಿತ್‌ ರಾಜ್‌ ನನ್ನಿಂದ ಬಲವಂತವಾಗಿ ಗಾಯಾಳುಗಳಿಗೆ ರೂ.5 ಲಕ್ಷ ಪರಿಹಾರ ಕೊಡಿಸಿದ್ದಾರೆ. ಇದು ಕಾನೂನು ಬಾಹಿರ. ಅವರ ವಿರುದ್ಧ ಕ್ರಮ ಕೈಗೊಳ್ಳಬೇಕುʼ ಎಂದು ಕೆಲ ದಿನಗಳ ಹಿಂದೆ ಮೂಡುಬಿದಿರೆ ಪೊಲೀಸರಿಗೆ ಬಸ್‌ ಮಾಲಕ ರಫೀಕ್‌ ದೂರು ನೀಡಿದ್ದು, ಈ ಹಿನ್ನೆಲೆಯಲ್ಲಿ ಸಮೀತ್‌ ರಾಜ್‌ರನ್ನು ಪೊಲೀಸರು ಬಂಧನ ಮಾಡಿ ಕೋರ್ಟ್‌ಗೆ ಹಾಜರುಪಡಿಸಿದ್ದು, ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ.

ಇದನ್ನೂ ಓದಿ: Donald Trump trade deal: ‘ಶೀಘ್ರದಲ್ಲೇ ಭಾರತದೊಂದಿಗೆ’, ಅಮೆರಿಕ ಮತ್ತು ಚೀನಾ ನಡುವೆ ಒಪ್ಪಂದಕ್ಕೆ ಸಹಿ ಹಾಕಿದ ನಂತರ ಟ್ರಂಪ್ ದೊಡ್ಡ ಘೋಷಣೆ