Affair: ಅನ್ಯ ಮಹಿಳೆ ಜತೆ ಕಂಡುಬಂದ ಸರ್ಕಾರಿ ಶಾಲೆಯ ಪ್ರಾಂಶುಪಾಲ – ಊರಜನ ಏನು ಮಾಡಿದ್ರು ನೋಡಿ

Affair: ಮಕ್ಕಳಿಗೆ ಒಳ್ಳೆ ಬುದ್ದಿ ಹೇಳಿ ಸಮಾಜಕ್ಕೆ ಮಾದರಿಯಾಗಬೇಕಿದ್ದ ಪ್ರಾಂಶುಪಾಲರೊಬ್ಬರು ತಾನೇ ಸಮಾಜ ತಲೆತಗ್ಗಿಸುವಂತ ಕೆಲಸ ಮಾಡಿದ್ದಾರೆ. ಇದಕ್ಕೆ ಅಲ್ಲಿನ ಗ್ರಾಮಸ್ಥರು ತಕ್ಕ ಪಾಠವನ್ನೇ ಕಲಿಸಿದ್ದಾರೆ. ಇಂಥ ಬುದ್ದಿಯ ಪ್ರಾಂಶುಪಾಲ ತನ್ನ ಕಾಲೇಜಿನ ಮಕ್ಕಳಿಗೆ ಯಾವ ರೀತಿಯ ಬುದ್ದಿ ಹೇಳಬಲ್ಲ.

ಬಿಹಾರದ ಸಹರ್ಸಾದಲ್ಲಿ ಬುಧವಾರ ರಾತ್ರಿ ಕೋಣೆಯಲ್ಲಿ ವಿಧವೆಯೊಂದಿಗೆ ಅಸಹ್ಯಕರ ಸ್ಥಿತಿಯಲ್ಲಿ ಸಿಕ್ಕಿಬಿದ್ದ ಸರ್ಕಾರಿ ಶಾಲೆಯ ಪ್ರಾಂಶುಪಾಲರನ್ನು ಗ್ರಾಮಸ್ಥರು ಥಳಿಸಿ ಅವರ ಮದುವೆ ಮಾಡಿಸಿದ್ದಾರೆ. ಈಗಾಗಲೇ ವಿವಾಹವಾಗಿದ್ದ ಪ್ರಾಂಶುಪಾಲರು, “ನಾನು ಈ ಮದುವೆಯಲ್ಲಿ ಸಂತೋಷವಾಗಿದ್ದೇನೆ. ನನ್ನ ಎಲ್ಲಾ ಗಂಡು ಮತ್ತು ಹೆಣ್ಣುಮಕ್ಕಳ ಮದುವೆ ಮಾಡಿಸಿದ್ದೇನೆ” ಎಂದು ಹೇಳಿದರು.
ವರದಿಗಳ ಪ್ರಕಾರ, ಪ್ರಾಂಶುಪಾಲರು ಮತ್ತು ಮಹಿಳೆಗೆ ಅವರವರ ಸಂಸಾರದಲ್ಲಿ ತಲಾ 5 ಮಕ್ಕಳಿದ್ದಾರೆ. ಪ್ರಕರಣ ದಾಖಲಿಕೊಂಡ ಪೊಲೀಸರು ಹೆಚ್ಚಿನ ತನಿಖೆ ಕೈಗೊಂಡಿದ್ದಾರೆ. ಪ್ರಾಂಶುಪಾಲರ ಪತ್ನಿ ಈ ಸಂಬಂಧ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.
Comments are closed.