Mangaluru: ಮಂಗಳೂರು: ಖೈದಿಗಳ ನಡುವೆ ಹೊಡೆದಾಟ: ಓರ್ವ ಆಸ್ಪತ್ರೆಗೆ ದಾಖಲು!

Share the Article

Mangaluru: ಜಿಲ್ಲಾ ಕಾರಾಗೃಹದಲ್ಲಿ ಖೈದಿಗಳ ನಡುವೆ ಹೊಡೆದಾಟ ನಡೆದಿದೆ. ಈ ಪ್ರಕರಣದಲ್ಲಿ ಓರ್ವನಿಗೆ ಗಂಭೀರ ಗಾಯಗಳಾಗಿದ್ದು, ಆತನನ್ನು ವೆನ್ಲಾಕ್ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ.

ಉಳ್ಳಾಲದ ರೌಡಿ ಮುಖರ್‌ ಮತ್ತು ಇತರ ಖೈದಿಗಳ ನಡುವೆ ಗಲಾಟೆ ನಡೆದಿದೆ. ಈ ಘಟನೆಯಲ್ಲಿ ರೌಡಿ ಮುರ್ಖ ಅಕ್ಷಯ್ ಕಲ್ಲೇಗ ಕೊಲೆ ಆರೋಪಿ ಕೇಶವ ಎಂಬಾತನ ಮೇಲೆ ಹಲ್ಲೆ ಮಾಡಿದ್ದಾನೆ. ಇದರಿಂದ ಗಂಭೀರ ಗಾಯಗೊಂಡ ಕೇಶವನನ್ನು ವೆನ್ಲಾಕ್ ಆಸ್ಪತ್ರೆಗೆ ಪೊಲೀಸರು ದಾಖಲಿಸಿದ್ದಾರೆ.

ಖೈದಿ ಗಾಯಾಳು ಕೇಶವ ಅಕ್ಷಯ್ ಕಲ್ಲೇಗ ಹತ್ಯೆಯ ಆರೋಪಿ. ಖೈದಿ ಮುಖರ್‌ ಮೇಲೆ ಈಗಾಗಲೇ 15 ಕ್ಕೂ ಹೆಚ್ಚು ಪ್ರಕರಣಗಳಿದ್ದು, 2022 ರಲ್ಲಿ ಆತನ ಕಾಲಿಗೆ ಗುಂಡು ಹಾರಿಸಿ ಪೊಲೀಸರು ವಶಕ್ಕೆ ಪಡೆದಿದ್ದರು. ಈ ಸಂಬಂಧ ಬರ್ಕೆ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಇದನ್ನೂ ಓದಿ:Viral Video : ತನ್ನ ಮೂತ್ರದಿಂದಲೇ ಕಣ್ಣುಗಳನ್ನು ತೊಳೆದುಕೊಂಡ ಮಹಿಳೆ – ವಿಡಿಯೋ ನೋಡಿ ಕ್ಯಾಕರಿಸಿ ಉಗಿದ ಜನ

Comments are closed.